ಶಿವಮೊಗ್ಗ : ಗಾಂಜಾ ಸೊಪ್ಪು ಬೆಳೆಯುತ್ತಿದ್ದವನ ಬಂಧನ
Update: 2017-10-16 18:43 IST
ಶಿವಮೊಗ್ಗ, ಅ. 16: ಗಾಂಜಾ ಸೊಪ್ಪು ಬೆಳೆಯುತ್ತಿದ್ದ ಆರೋಪದ ಮೇರೆಗೆ ಅಬಕಾರಿ ಇಲಾಖೆಯ ಸಿಬ್ಬಂದಿಗಳು ಓರ್ವನನ್ನು ಬಂಧಿಸಿದ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅಲಸೆ ಗ್ರಾಮದಲ್ಲಿ ವರದಿಯಾಗಿದೆ. ನಾಗರಾಜ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಸುಮಾರು 23,500 ರೂ. ಮೌಲ್ಯದ 7900 ಕೆ.ಜಿ. ತೂಕದ ಗಾಂಜಾ ಸೊಪ್ಪನ್ನು ವಶಕ್ಕೆ ಪಡೆದುಕೊಂಡಿದ್ದಾರೆ.