×
Ad

ಆರೋಪ ಸುಳ್ಳಾದರೆ ವಿಧಾನಸೌಧದ ಮುಂದೆ ನೇಣು ಹಾಕಿಕೊಳ್ಳುವೆ : ಬಿ.ಜೆ.ಪುಟ್ಟಸ್ವಾಮಿ

Update: 2017-10-16 20:24 IST

ಬೆಂಗಳೂರು, ಅ.16: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಡಿನೋಟಿಫೈ ಆರೋಪ ಸಂಬಂಧ ಬಿಜೆಪಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ(ಎಸಿಬಿ) ದೂರು ನೀಡಿದ್ದು, ಈ ಸಂಬಂಧ ನನ್ನ ಆರೋಪ ಸುಳ್ಳಾದರೆ ವಿಧಾನಸೌಧದ ಮುಂದೆ ನೇಣು ಹಾಕಿಕೊಳ್ಳುವೆ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಹೇಳಿದ್ದಾರೆ.

 ಸೋಮವಾರ ನಗರದ ರೇಸ್‌ಕೋರ್ಸ್ ರಸ್ತೆಯ ಎಸಿಬಿ ಪ್ರಧಾನ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಭೂಪಸಂದ್ರದಲ್ಲಿ 6.36 ಎಕರೆ ಭೂಮಿಯನ್ನು ಡಿನೋಟಿಫೈ ಮಾಡಿದ್ದಾರೆ. ಈ ಹಿನ್ನೆಲೆ ಎಸಿಬಿಗೆ ದೂರು ನೀಡಿದ್ದೇನೆ ಎಂದರು.

ಎಸಿಬಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಯಲ್ಲಿದೆ. ಈಗ ಎಸಿಬಿ ಹಾಗೂ ಸಿಎಂ ಯೋಗ್ಯತೆ ಗೊತ್ತಾಗುತ್ತೆ. ಮೊಕದ್ದಮೆ ದಾಖಲು ಮಾಡ್ತಾರಾ, ತನಿಖೆ ಶೀಘ್ರ ನಡೆಸುತ್ತಾರಾ ಎಂದು ಗೊತ್ತಾಗಲಿದೆ. ಅಲ್ಲದೆ, ನಾನು ಬಿಡುಗಡೆಗೊಳಿಸಿದ ದಾಖಲೆಗಳಲ್ಲಿ ಸತ್ಯಾಂಶವಿದೆ. ಇದು ಸುಳ್ಳಾದರೆ ವಿಧಾನಸೌಧದ ಮುಂಭಾಗ ನೇಣು ಹಾಕಿಕೊಳ್ಳುವೆ ಎಂದು ಪುಟ್ಟಸ್ವಾಮಿ ಸವಾಲು ಹಾಕಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನ್ಯಾಯವಾದಿಗಳ ತಂಡ ರಚನೆ ಮಾಡಲಿ. ಅದರಲ್ಲಿ ಅಕ್ರಮ ಬಯಲಾಗುತ್ತೆ. ಒಂದು ವೇಳೆ ನಾನು ಬಿಡುಗಡೆ ಮಾಡಿರುವ ದಾಖಲು ನಿಜವಾದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ನೈತಿಕ ಹೊಣೆ ಹೊತ್ತು ತಕ್ಷಣವೇ ರಾಜೀನಾಮೆ ನೀಡಬೇಕೆಂದು ಅವರು ಹೇಳಿದರು.

ಈ ವೇಳೆ ಶಾಸಕರಾದ ವೈ.ಎ.ನಾರಾಯಣಸ್ವಾಮಿ, ಶಾಸಕ ಮುನಿರಾಜು ಸೇರಿ ಬಿಜೆಪಿ ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News