ಕೆಪಿಸಿಸಿ ಚುನಾವಣಾ ಪ್ರಣಾಳಿಕೆ ಸಮಿತಿಗೆ ವೀರಪ್ಪ ಮೊಯ್ಲಿ ಸಾರಥ್ಯ
ಬೆಂಗಳೂರು, ಅ.16: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಅಧ್ಯಕ್ಷತೆಯಲ್ಲಿ 33 ಮಂದಿಯನ್ನು ಒಳಗೊಂಡ ಚುನಾವಣಾ ಪ್ರಣಾಳಿಕೆ ಸಮಿತಿಯನ್ನು ರಚಿಸಿ ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಆದೇಶ ಹೊರಡಿಸಿದ್ದಾರೆ.
ಡಾ.ಬಿ.ಎಲ್.ಶಂಕರ್‌ರನ್ನು ಚುನಾವಣಾ ಪ್ರಣಾಳಿಕೆ ಸಮಿತಿಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಸದಸ್ಯರಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಎಸ್.ಆರ್.ಪಾಟೀಲ್, ದಿನೇಶ್ ಗುಂಡೂರಾವ್, ಕಾಗೋಡು ತಿಮ್ಮಪ್ಪ, ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಮಾರ್ಗರೇಟ್ ಆಳ್ವ, ಡಾ.ಎಚ್.ಸಿ. ಮಹದೇವಪ್ಪ, ಅಪ್ಪಾಜಿ ನಾಡಗೌಡ, ವಿ.ಆರ್.ಸುದರ್ಶನ್, ಕೃಷ್ಣಭೈರೇಗೌಡ.
ಸತೀಶ್ ಜಾರಕಿಹೊಳಿ, ವಿನಯಕುಮಾರ್ ಸೊರಕೆ, ಜೆ.ಅಲೆಕ್ಸಾಂಡರ್, ಕೆ.ಸಿ.ಕೊಂಡಯ್ಯ, ಪ್ರೊ.ಬಿ.ಕೆ.ಚಂದ್ರಶೇಖರ್, ಡಾ.ಎಲ್.ಹನುಮಂತಯ್ಯ, ಕೆ.ಎನ್.ರಾಜಣ್ಣ, ಐ.ಜಿ.ಸನದಿ, ನಂಜಯ್ಯಮಠ್, ಅಲ್ಲಮಪ್ರಭು ಪಾಟೀಲ್, ವೆಂಕಟರಾವ್ ಘೋರ್ಪಡೆ, ಪ್ರೊ.ರಾಧಾಕೃಷ್ಣ, ಡಾ.ಲೋಹಿತ್ ನಾಯ್ಕರ್, ಪುಷ್ಪಾ ಅಮರನಾಥ್, ಝಮೀರ್‌ಪಾಷ, ಎಚ್.ಎಂ.ರೇವಣ್ಣ. ಪ್ರಿಯಾಂಕ್ ಖರ್ಗೆ, ಯು.ಟಿ.ಖಾದರ್, ಎಚ್.ಎಂ.ವಿಶ್ವನಾಥ್, ರಾಮಲಿಂಗಾ ರೆಡ್ಡಿ, ಕೆ.ಜೆ.ಜಾರ್ಜ್, ಉಮಾಶ್ರೀ ಹಾಗೂ ಡಾ.ಸೈಯ್ಯದ್ ನಾಸೀರ್ ಹುಸೇನ್ ಅವರನ್ನು ಒಳಗೊಂಡ 33 ಸದಸ್ಯರ ಚುನಾವಣಾ ಪ್ರಣಾಳಿಕೆ ಸಮಿತಿಯನ್ನು ರಚಿಸಲಾಗಿದೆ.
ಇದಲ್ಲದೆ, ಪಕ್ಷ ಸಂಘಟನೆಗೆ ಒತ್ತು ನೀಡಲು 15 ಜಿಲ್ಲೆಗಳ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ರಾಹುಲ್‌ಗಾಂಧಿ ಆದೇಶ ಹೊರಡಿಸಿದ್ದಾರೆ.
ಜಿಲ್ಲಾಧ್ಯಕ್ಷರು: ಚಿಕ್ಕೋಡಿ-ಲಕ್ಷ್ಮಣರಾವ್ ಚಿಂಗಲೆ, ಬೆಳಗಾವಿ- ವಿನಯ್ ನವಲಗಟ್ಟಿ, ಬಳ್ಳಾರಿ ನಗರ-ರಫೀಕ್, ದಕ್ಷಿಣ ಕನ್ನಡ-ಕೆ.ಹರೀಶ್‌ಕುಮಾರ್, ಗುಲ್ಬರ್ಗ- ಜಗದೇವ ಗುತ್ತೇದಾರ್, ಹಾವೇರಿ-ಸೈಯ್ಯದ್ ಆಝಮ್‌ಪೀರ್ ಖಾದ್ರಿ, ಕೊಡಗು- ಎಂ.ಬಿ.ಶಿವಮುದ್ದಪ್ಪ, ಉಡುಪಿ-ಜನಾರ್ದನ ತೋನ್ಸೆ, ರಾಮನಗರ- ಎಸ್.ಗಂಗಾಧರ್, ಬೆಂಗಳೂರು ಉತ್ತರ-ಎಂ.ರಾಜಕುಮಾರ್, ಬೆಂಗಳೂರು ಕೇಂದ್ರ-ಜಿ.ಶೇಖರ್, ಬೆಂಗಳೂರು ದಕ್ಷಿಣ-ಜಿ.ಕೃಷ್ಣಪ್ಪ, ಹುಬ್ಬಳ್ಳಿ ನಗರ-ಅಲ್ತಾಫ್ ಹಲ್ಲೂರ್, ಬೀದರ್-ಬಸವರಾಜ್‌ಜಾಬ್ ಶೆಟ್ಟಿ ಹಾಗೂ ಚಿಕ್ಕಬಳ್ಳಾಪುರ-ಜಿ.ಕೇಶವ ರೆಡ್ಡಿಯನ್ನು ನೇಮಕ ಮಾಡಲಾಗಿದೆ.