ರೇಖಾ ಚಿತ್ರ ಗೊಂದಲಕ್ಕೆ ತೆರೆ ಎಳೆದ ಸಿಟ್ ತನಿಖಾಧಿಕಾರಿಗಳು

Update: 2017-10-16 16:56 GMT

ಬೆಂಗಳೂರು, ಅ.16: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಶಂಕಿತ ಹಂತಕರ ರೇಖಾಚಿತ್ರಗಳ ಬಗೆಗಿನ ಗೊಂದಲಕ್ಕೆ ಸಿಟ್ ತನಿಖಾಧಿಕಾರಿಗಳು ತೆರೆ ಎಳೆದಿದ್ದಾರೆ.

ಶನಿವಾರ ಸಿಟ್ ತನಿಖಾಧಿಕಾರಿಗಳು ಮೂವರು ಶಂಕಿತರ ರೇಖಾ ಚಿತ್ರಗಳನ್ನು ಬಿಡುಗಡೆ ಮಾಡಿದ್ದರು. ಇದರಲ್ಲಿ ಒಬ್ಬ ವ್ಯಕ್ತಿಯ ಹಣೆಗೆ ಕುಂಕುಮ ಇಟ್ಟುಕೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಗೊಂದಲ ಉಂಟಾಗಿತ್ತು. ಆದರೆ, ತನಿಖಾಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಗೌರಿ ಅವರ ತಾಯಿ ಇಂದಿರಾ ಲಂಕೇಶ್ ನೀಡಿರುವ ಮಾಹಿತಿ ಆಧರಿಸಿ ಕುಂಕುಮ ಇಡಲಾಗಿದೆ ಎಂದಿದ್ದಾರೆ.

ಸೆ.5ರ ಸಂಜೆ ಗೌರಿ ಲಂಕೇಶ್‌ರನ್ನು ಕೊಲೆ ಮಾಡಲಾಗಿತ್ತು. ಆದರೆ, ರಾತ್ರಿಯ ವೇಳೆ ಕೊಲೆ ನಡೆದಿದ್ದು, ಹಂತಕರು ಹೆಲ್ಮೆಟ್ ಹಾಕಿದ್ದರು. ಆದರೂ, ಸಿಟ್ ತನಿಖಾಧಿಕಾರಿಗಳಿಗೆ ಬೈಕ್ ಸಂಖ್ಯೆ ಕಾಣಲಿಲ್ಲ. ಕುಂಕುಮ ಹೇಗೆ ನೋಡಿದ್ದಾರೆ ಎಂದೆಲ್ಲಾ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಲಾಗುತಿತ್ತು. ಹೀಗಾಗಿ, ಸಿಟ್ ತನಿಖಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News