×
Ad

ಹಿಂಗಾರು ಮಳೆ ಭಾರಿ ಪ್ರಮಾಣದಲ್ಲಿ ಬಿದ್ದ ಪರಿಣಾಮ ಕೃಷಿಯ ಮೇಲೆ ಪ್ರತಿಕೂಲ ಪರಿಣಾಮ: ದೇವರಾಜ್

Update: 2017-10-16 22:15 IST

ಚಿಕ್ಕಮಗಳೂರು, ಅ.16: ಸಕಾಲಿಕ ಮುಂಗಾರು ಮಳೆ ಬೀಳದಿರುವ ಜೊತೆಗೆ ಅಕಾಲಿಕವಾಗಿ ಹಿಂಗಾರು ಮಳೆ ಭಾರಿ ಪ್ರಮಾಣದಲ್ಲಿ ಬಿದ್ದ ಪರಿಣಾಮ ಕೃಷಿಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿ ಕೃಷಿಕಸಮುದಾಯ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಂತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅವರ ಸಂಪೂರ್ಣ ಸಾಲಮನ್ನಾ ಮಾಡುವ ಮೂಲಕ ನೆರವಿಗೆ ಧಾವಿ ಸಬೆಕೆಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಹೆಚ್.ದೇವರಾಜ್ ಆಗ್ರಹಪಡಿಸಿದ್ದಾರೆ.

 ಅವರು ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂಗಾರು ಮಳೆ ಈ ಬಾರಿ ಸಕಾ ಲದಲ್ಲಿ ಕಂಡು ಕೇಳರಿಯದಂತೆ ಕಡಿಮೆ ಪ್ರಮಾಣದಲ್ಲಿ ಬಿದ್ದಿದ್ದು ಅದರಿಂದ ಭತ್ತ, ರಾಗಿ, ಜೋಳ ಮುಂತಾದ ಬೆಳೆಗಳ ಮೇಲೆ ಪ್ರತಿ ಕೂಲ ಪರಿಣಾಮ ಬೀರಿತ್ತು. ಹಿಂಗಾರು ಮಳೆ ನಿರೀಕ್ಷಣೆ ಮೀರಿ ಅದುಕೂಡ ಅಕಾಲಿಕ ಸುರಿದ ಪರಿಣಾಮ ಜಿಲೆಲಯ ಮಲೆನಾಡು ಮತ್ತು ಬಯಲಭಾಗದ ವಾಣಿಜ್ಯ ಬೆಲೆಗಳು ಸೇರಿದಂತೆ ಎಲ್ಲಾ ಬೆಳೆಗಳನ್ನು ನಾಶಮಾಡಿತು. ಹೀಗೆ ಮುಂಗಾರು ಮತ್ತು ಹಿಂಗಾರು ಮಳೆ ಕೃಷಿ ಕ್ಷೇತ್ರದ ಮೇಲೆ ತೀವ್ರ ದುಷ್ಪರಿಣಾಮ  ಬೀರಿದೆ ಎಂದು ಅವರು ಹೇಳಿದರು.

ಈ ಬಾರಿ ಪ್ರಕೃತಿ ವಿಕೋಪದ ಪರಿಸ್ಥಿತಿಯ ಕಾರಣ ರೈತರ ಬದುಕು ಅಯೋಮಯವಾಗಿದೆ ಎಂದ ಅವರು ಹಿಂಗಾರು ಮಳೆ ಬೀಳದಿದ್ದರೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗುತ್ತಿತ್ತು ನಿಜ. ಆದರೆ ಅಪಾರ ಪ್ರಮಾಣದ ಅಕಾಲಿಕ ಮಳೆಯಿಂದ ಎಲ್ಲಾ ಬೆಳೆಗಳು ನಾಶವಾಗಿದೆ. ಸರ್ಕಾರ ತಕ್ಷಣ ಸಮೀಕ್ಷೆ ಮೂಲಕ ಬೆಳೆನಷ್ಟ ಅಂದಾಜುಮಾಡಬೇಕು. ಅದರ ಆಧಾರದಲ್ಲಿ ಪರಿಹಾರಕ್ರಮ ತೆಗೆದುಕೊಳ್ಳಬೇಕೆಂದು ತಮ್ಮ ಪಕ್ಷ ಒತ್ತಾಯಿಸುತ್ತದೆ ಎಂದರು.

ಆರ್ಥಿಕ ಸಂಕಷ್ಟದ ಕಾರಣದಿಂ ದಲೇ ಅನೇಕ ರೈತರು ಆತ್ಮಹತ್ಯೆಯ ದಾರಿ ತುಳಿದಿದ್ದಾರೆ. ಕೃಷಿಕರ ಆತ್ಮ ಹತ್ಯೆ ತಡೆಗಟ್ಟಲು ಅವರುಗಳ ಎಲ್ಲಾ ಸಾಲವನ್ನು ಕೇಂದ್ರ ಮತ್ತು ಸರ್ಕಾರಗಳು ಆದ್ಯತೆ ಎಂದು ಪರಿಗಣಿಸಿ ಮನ್ನಾ ಮಾಡಬೇಕೆಂದು ಒತ್ತಾಯಿಸಿದ ಅವರು ಜೊತೆಗೆ ಪ್ರಕೃತಿ ವಿಕೋ ಪದಿಂದ ಉಂಟಾಗಿರುವ ಕಾಫಿ, ಮೆಣಸು ಸೇರಿದಂತೆಲ್ಲಾ ಎಲ್ಲಾ ಬೆಳೆಗಳಿಗೆ ಪರಿಹಾರಕ್ರಮ ತೆಗೆದುಕೊಳ್ಳಬೇಕೆಂದರು.

ಕೇಂದ್ರ ಸರ್ಕಾರದ ಕೆಟ್ಟ ಅಮದು ನೀತಿಯ ಪರಿಣಾಮ ದೇಸಿಯ ಮೆಣಸುಬೆಳೆ ಬೆಲೆಕುಸಿತ ಕಂಡಿದೆ. ಆಮದು ಶುಲ್ಕ ರದ್ದು ಪಡಿಸಿರುವು ದರಿಂದ ಕಳಪೆದರ್ಜೆಯ ವಿದೇಶಿ ಮೆಣಸನ್ನು ದಲ್ಲಾಳಿಗಳು ಆಮದು ಮಾಡಿಕೊಂಡು ಇಲ್ಲಿ ಮಾರಾಟ ಮಾಡುತ್ತಿರುವುದರಿಂದ ಅತ್ಯಂತ ಉತ್ತಮ ಗುಣಮಟ್ಟದ ದೇಸೀಯ ಮೆಣಸಿನ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿತಕಂಡಿದ್ದು ಇದುಕೂಡ ರೈತರ ಆರ್ಥಿಕ ಸಮಸ್ಯೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತಕ್ಷಣ ತನ್ನ ಆಮದುನೀತಿಯನ್ನು ಬಿಗಿಗೊಳಿಸಿ ಭಾರತದ ಕಾಳುಮೆಣ ಸಿಗೆ ಬೆಲೆದೊರಕಿಸಿ ಬೆಳೆಗಾರನಿಗೆ ನೆರವಾಗಬೇಕೆಂದು ಆಗ್ರಹಿಸಿದರು.ಗೋಷ್ಟಿಯಲ್ಲಿ ಚಂದ್ರಪ್ಪ, ಜಮೀಲ್ ಅಹ್ಮದ್, ಜಯರಾಜ ಅರಸ್, ದೇವಿ ಪ್ರವಾದ್, ಜಗನ್ನಾಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News