ಬಂಡೀಪುರ ಹುಲಿಯೋಜನೆಯ ವಲಯಾರಣ್ಯಾಧಿಕಾರಿ ಆತ್ಮಹತ್ಯೆಗೆ ಯತ್ನ

Update: 2017-10-17 12:36 GMT

ಗುಂಡ್ಲುಪೇಟೆ, ಅ.17: ಬಂಡೀಪುರ ಹುಲಿಯೋಜನೆಯ ವಲಯಾರಣ್ಯಾಧಿಕಾರಿಯೊಬ್ಬರು ವೈಯುಕ್ತಿಕ ಕಾರಣದಿಂದ ಆತ್ಮಹತ್ಯೆಗೆ ಪ್ರಯತ್ನ ನಡೆಸಿದ ಘಟನೆ ನಡೆದಿದೆ.

ಕಳೆದ ವರ್ಷದಿಂದ ಗುಂಡ್ಲುಪೇಟೆ ಉಪವಿಭಾಗದ ಬಫರ್ ಝೋನ್‍ನಲ್ಲಿ ವಲಯಾರಣ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಹುಣಸೂರು ಮೂಲದ ಕೆ.ಆರ್.ಮುಕುಂದ ಆತ್ಮಹತ್ಯೆಗೆ ಪ್ರಯತ್ನ ಪಟ್ಟವರೆಂದು ಗುರುತಿಸಲಾಗಿದೆ.

ಮುಕುಂದ ಅವರು ಕಳೆದ ನಾಲ್ಕು ವರ್ಷಗಳಿಂದ ಪಟ್ಟಣದ ಅರಣ್ಯ ಇಲಾಖೆಯ ವಸತಿಗೃಹದಲ್ಲಿ ವಾಸವಿದ್ದರು. ಬೆಳ್ತಂಗಡಿಯಲ್ಲಿದ್ದ ಇವರ ಪತ್ನಿ ಹಾಗೂ ಮಕ್ಕಳಿಂದ ದೂರವಿದ್ದು ಸ್ವಲ್ಪಮಟ್ಟಿಗೆ ಅನಾರೋಗ್ಯದಿಂದ ಬಳಲುತ್ತಿದ್ದು, ಇದರಿಂದ ಅವರು ಖಿನ್ನತೆಗೊಳಗಾಗಿದ್ದು, ಸೋಮವಾರ ಬೆಳಗ್ಗೆ ತಮ್ಮ ವಸತಿಗೃಹದಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ನೀರು ತೆಗೆದುಕೊಳ್ಳಲು ಅಲ್ಲಿಗೆ ಹೋದ ಡಿ.ದರ್ಜೆ ನೌಕರನೊಬ್ಬ ಇದನ್ನು ನೋಡಿ ಸಹೋದ್ಯೋಗಿಗಳ ನೆರವಿನಿಂದ ಕೆಳಗಿಳಸಿ ಆಸ್ಪತ್ರೆಗೆ ಕರೆದೊಯದ್ದಿದ್ದಾನೆ. ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ ಆರ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.

ಆಸ್ಪತ್ರೆಗೆ ಬಂಡೀಪುರ ಹುಲಿಯೋಜನೆಯ ನಿರ್ದೇಶಕ ಅಂಬಾಡಿ ಮಾಧವ, ಎಸಿಎಫ್ ರವಿಕುಮಾರ್ ಹಾಗೂ ಸಹೋದ್ಯೋಗಿಗಳು ಭೇಟಿ ನೀಡಿ ಮುಕುಂದ ಅವರಿಗೆ ಸಾಂತ್ವನ ಹೇಳಿದ್ದಾರೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News