ಅ.26ರಂದು ರಾಜ್ಯಮಟ್ಟದ ಮುಸ್ಲಿಂ ಸಮಾವೇಶ

Update: 2017-10-17 17:50 GMT

ಮಂಡ್ಯ, ಅ.17: ಮೈಸೂರಿನ ರಾಜೀವ್ ನಗರದ 2ನೆ ಹಂತದಲ್ಲಿರುವ ಅಲ್‍ ಬದರ್ ಮಸೀದಿ ಮುಂಭಾಗ ಮಹಾನಗರ ಪಾಲಿಕೆಯ ಖಾಲಿ ಮೈದಾನದಲ್ಲಿ ಅ.26 ರಂದು ಬೆಳಗ್ಗೆ 11ಕ್ಕೆ ರಾಜ್ಯಮಟ್ಟದ ಮುಸ್ಲಿಂ ಸಾರ್ವಜನಿಕ ಸಮಾವೇಶವ ಹಮ್ಮಿಕೊಳ್ಳಲಾಗಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮೈಸೂರು ಸಿಟಿ ಮುಸ್ಲಿಂ ಫೋರಂ ಸಂಚಾಲಕ ಶಬ್ಬೀರ್ ಅಹ್ಮದ್ ಖಾನ್ ಮತ್ತು ಜಂಟಿ ಸಂಚಾಲಕ ಸೈಯದ್ ರಹಮತ್ ಉಲ್ಲಾ, ಸಮಾವೇಶದಲ್ಲಿ ಮುಸ್ಲಿಂ ಜನಾಂಗದ ಕುಂದುಕೊರತೆ ಚರ್ಚಿಸಿ ರಾಜ್ಯ ಸರಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಸಚಿವರಾದ ಡಾ.ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್, ಡಾ.ಎಚ್.ಸಿ.ಮಹದೇವಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ದೀನೇಶ್ ಗುಂಡೂರಾವ್, ವಿಶ್ರಾಂತ ಕುಲಪತಿಗಳಾದ ಬಿ.ಶೇಕ್ ಅಲಿ, ತರೀನ್, ಶಕೀಬ್ ಉರ್‍ರಹಮಾನ್, ಸೇರಿದಂತೆ ಮುಸ್ಲಿಂ ಧರ್ಮಗುರುಗಳು ಮತ್ತು ಇತರೆ ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಈ ಸಮಾವೇಶದಲ್ಲಿ ಮಂಡ್ಯ ಜಿಲ್ಲೆ ಸೇರಿದಂತೆ ರಾಜ್ಯದ ಮುಸ್ಲಿಂ ಸಮುದಾಯದ ಜನಪ್ರತಿನಿಧಿಗಳು, ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಜನರು ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News