ಕಾರ್ಡ್ ಸ್ವೀಕರಿಸದ ಆಸ್ಪತ್ರೆಗಳ ವಿರುದ್ಧ ಕ್ರಮ: ಡಿಸಿ ಎಚ್ಚರಿಕೆ

Update: 2017-10-17 17:58 GMT

ಶಿವಮೊಗ್ಗ, ಅ.17: ಅಸಂಘಟಿತ ಕೂಲಿ ಕಾರ್ಮಿಕರಿಗೆ ರಾಷ್ಟ್ರೀಯ ಸಸ್ಥಾ ಬಿಮಾ ಯೋಜನೆ ಅಡಿ ನೀಡುವ ಕಾರ್ಡ್‌ಗಳನ್ನು ಸ್ವೀಕರಿಸದೆ ಇರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ. ಲೋಕೇಶ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇಂದು ನಡೆದ ರಾಷ್ಟ್ರೀಯ ಸಸ್ಥಾ ಬಿಮಾ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾರ್ಡ್ ಸ್ವೀಕರಿಸದೆ ಇರುವ ಮಲ್ಲಿಕಾರ್ಜುನ ನರ್ಸಿಂಗ್ ಹೋಂ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಸೂಚಿಸಿದರು.

ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದಾಧಿಕಾರಿಗಳಿಗೆ ರಾಷ್ಟ್ರೀಯ ಸಸ್ಥಾ ಬಿಮಾ ಯೋಜನೆ ಕುರಿತು ರೋಗಿಗಳಿಗೆ ಮಾಹಿತಿ ನೀಡಬೇಕು. ಆಸ್ಪತ್ರೆಗೆ ಬರುವ ರೋಗಿಗಳಿಗೆ ತಪಾಸಣೆ ಮಾಡುವ ಸಂದಭರ್ದಲ್ಲಿ ವೈದ್ಯರು ರೋಗಿಗಳಿಗೆ ಕಾರ್ಡ್ ಬಗ್ಗೆ ಕೇಳಬೇಕು. ಈ ರೀತಿ ವಿಚಾರಿಸದೆ ಇರುವ ಸರಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಹೊಸನಗರ ಮತ್ತು ತೀರ್ಥಹಳ್ಳಿಯಲ್ಲಿ ಖಾಸಗಿ ಆಸ್ಪತ್ರೆಗಳು ಆರ್‌ಎಸ್‌ಬಿವೈ ಕಾರ್ಡ್ ಸ್ವೀಕಾರ ಕಡಿಮೆಯಾಗಿದೆ. ಆದಷ್ಟು ಈ ಕಾರ್ಡಳನ್ನು ಸ್ವೀಕರಿಸಿ ಹೆಚ್ಚಿನ ಅನುಕೂಲ ಮಾಡಿ ಕೊಳ್ಳಬಹುದು. ಸ್ವೀಕರಿಸದ ಆಸ್ಪತ್ರೆಗಳಲ್ಲಿ ಕ್ರಮ ಜರಗಿಸಲು ಡಿಎಚ್‌ಒಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ 47 ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಡ್ ಸ್ವೀಕರಿಸಲಾಗುತ್ತಿದೆ ಎಂದು ಯೋಜನೆಯ ಸಂಚಾಲಕ ಪ್ರಕಾಶ್ ತಿಳಿಸಿದರು.

ಈ ವೇಳೆ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಸಭೆಯಲ್ಲಿ ಇಂದಿರಾ ಸುರಕ್ಷಾ ಯೋಜನೆ ಕಾರ್ಡ್ ವಿತರಿಸಲಾಯಿತು.

ಸಭೆಯಲ್ಲಿ ಡಿಎಚ್‌ಒ ಡಾ. ರಾಜೇಶ್ ಸುರಗೀ ಹಳ್ಳಿ, ಡಾ. ನಟರಾಜ್, ಟಿಎಚ್‌ಒ ಡಾ. ದಿನೇಶ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News