ಗೋಮಾಳ ಕಬಳಿಕೆ ಯತ್ನ ಆರೋಪ: ಗ್ರಾಮಸ್ಥರಿಂದ ಡಿಸಿಗೆ ಮನವಿ

Update: 2017-10-17 18:07 GMT

ಚಿಕ್ಕಮಗಳೂರು, ಅ.17: ಸರಸ್ವತಿಪುರ ಗ್ರಾಪಂ ವ್ಯಾಪ್ತಿಯ ಕಂಸಾಗರ ಗ್ರಾಮದ ಸ.ನಂ.18ರಲ್ಲಿ 17 ಎಕರೆ 39 ಗುಂಟೆ ಮತ್ತು 19ರಲ್ಲಿ 29 ಗುಂಟೆ ಹಿಂದೂ ಸ್ಮಶಾನ ಹಾಗೂ ಗೋಮಾಳ ಭೂಮಿಯನ್ನು ಖಾಸಗಿ ಸಂಸ್ಥೆ ಕಬಳಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಗ್ರಾಮದ ದಾಖಲೆಗಳು ಹಾಗೂ ಪಹಣಿಯಲ್ಲೂ ಇದನ್ನೇ ಉಲ್ಲೇಖಿಸ ಲಾಗಿದೆ. ಕೆಲ ದಿನಗಳ ಹಿಂದೆ ಕಡೂರಿನ ಕೆಲವರು ಸರ್ವೇಯರ್ ಕರೆತಂದು ಭೂಮಿ ಅಳೆಸುತ್ತಿದ್ದಾಗ ಅನುಮಾನಗೊಂಡ ಗ್ರಾಮಸ್ಥರು ಪರಿಶೀಲಿಸಿದಾಗ ಸಮುದಾವೊಂದರ ಸಂಘಟನೆ ಹೆಸರಿನಲ್ಲಿ ಗ್ರಾಮದ ಉಪಯೋಗಕ್ಕೆ ಬಳಕೆಯಾಗುತ್ತಿದ್ದ ಭೂಮಿಯನ್ನು ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ತಿಳಿದಿದೆ. ಮೇವು, ಶವಸಂಸ್ಕಾರಕ್ಕೆ ಇರುವ ಈ ಗೋಮಾಳವನ್ನು ಯಾರಿಗೂ ಮಂಜೂರು ಮಾಡಬಾರದೆಂದು ಒತ್ತಾಯಿಸಿದರು.

ಕಂಸಾಗರ ಗ್ರಾಮದಲ್ಲಿ ದನಕರುಗಳಿಗೆ ಗೋಮಾಳವು ಮೇವು ಒದಗಿಸಿದೆ. ಪಂಚಾಯತ್, ಗ್ರಾಮಸ್ಥರು ಇಲ್ಲಿ ಮೂರು ಬೃಹತ್ ಗೋಕಟ್ಟೆಗಳನ್ನು ಅಭಿವೃದ್ಧಿಪಡಿಸಿ ಜಲ ಶೇಖರಣೆಗೆ ಅನುವು ಮಾಡಿಕೊಟ್ಟಿದ್ದಾರೆ. ಇಲ್ಲಿ ಶವಸಂಸ್ಕಾರ ನಡೆಸಿಕೊಂಡು ಬರಲಾಗುತ್ತಿದ್ದು, ಬೇಲಿ ನಿರ್ಮಿಸಿ ಸ್ಮಶಾನ ಅಭಿವೃದ್ಧಿಪಡಿಸುವ ಯೋಜನೆಯನ್ನೂ ಹೊಂದಲಾಗಿತ್ತು. ಗ್ರಾಪಂ ವತಿಯಿಂದ ಬೃಹತ್ ದನದದೊಡ್ಡಿ ಮತ್ತು ಕುರಿಯದೊಡ್ಡಿ ನಿರ್ಮಿಸುವ ಸಿದ್ಧತೆಯಲ್ಲಿದ್ದಾಗ ಖಾಸಗಿ ಸಂಸ್ಥೆ ಈ ಗೋಮಾಳದ ಮೇಲೆ ಕಣ್ಣುಹಾಕಿದೆ ಎಂದು ಮನವಿಯಲ್ಲಿ ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News