ಅಜ್ಜಂಪುರ ತಾಲೂಕಿಗೆ ಚಿಕ್ಕಬಾಸೂರು ಸೇರಿಸದಿರಲು ಡಿಸಿಗೆ ಮನವಿ

Update: 2017-10-17 18:16 GMT

ಚಿಕ್ಕಮಗಳೂರು, ಅ.17: ಚಿಕ್ಕಬಾಸೂರು, ಸೀಗೆಹಡ್ಲು, ಬಂಟಿಗನಹಳ್ಳಿ ಗ್ರಾಮಗಳನ್ನು ಹೊಸದಾಗಿ ಸೇರ್ಪಡೆಯಾಗುತ್ತಿರುವ ಅಜ್ಜಂಪುರ ತಾಲೂಕಿಗೆ ಸೇರ್ಪಡೆ ಮಾಡಬಾರದು ಎಂದು ಒತ್ತಾಯಿಸಿ ಸ್ಥಳೀಯ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೆೇರಿಗೆ ತೆರಳಿ ಮಂಗಳವಾರ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ 49 ಹೊಸ ತಾಲೂಕುಗಳು ಸೇರ್ಪಡೆಯಾಗಿದ್ದು, ಅದರಲ್ಲಿ ಅಜ್ಜಂಪುರ ಕೂಡ ಒಂದಾಗಿದೆ. ಈ ತಾಲೂಕಿಗೆ ಕಡೂರು ತಾಲೂಕಿನ ಹಿರೇನಲ್ಲೂರು ಹೋಬಳಿಯ ಬಾಸೂರು ಗ್ರಾಮ ಪಂಚಾಯತ್‌ನ್ನು ಸೇರ್ಪಡೆಗೊಳಿಸುವ ಪ್ರಕಿಯೆ ನಡೆಸುತ್ತಿರುವುದು ಸರಿಯಲ್ಲ. ಈ ಗ್ರಾಮವು ಕಡೂರು ತಾಲೂಕಿಗೆ ಕೇವಲ 7 ಕಿ.ಮೀ. ದೂರವಿದೆ. ಆದರೆ ಅಜ್ಜಂಪುರಕ್ಕೆ 25 ಕಿ.ಮೀ. ದೂರವಿದೆ. ಕಡೂರಿಗೆ ತೆರಳುವ ಸಂಪರ್ಕದಂತೆ ಅಜ್ಜಂಪುರಕ್ಕೆ ಮಾರ್ಗದ ಸೌಕರ್ಯಗಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಗ್ರಾಮದಲ್ಲಿ ಬಹುಸಂಖ್ಯಾತ ಕೂಲಿ ಕಾರ್ಮಿಕರು ಇರುವುದರಿಂದ ಅವರು ಉದ್ಯೋಗಕ್ಕಾಗಿ ಕಡೂರನ್ನೇ ನೆಚ್ಚಿಕೊಂಡಿದ್ದಾರೆ ಎಂದಿದ್ದಾರೆ.
ಈ ಸಮಯದಲ್ಲಿ ಜಿಪಂ ಸದಸ್ಯ ಮಹೇಶ್ ಒಡೆಯರ್ ನೇತೃತ್ವದಲ್ಲಿ ಚಿಕ್ಕಬಾಸೂರು ಗ್ರಾಮಸ್ಥರಾದ ತಿಪ್ಪಯ್ಯ, ಜಯಪ್ಪಸಿ.ಆರ್. ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News