33 ಕೆಎಎಸ್ ಅಧಿಕಾರಿಗಳಿಗೆ ಐಎಎಸ್ ಬಡ್ತಿಗೆ ರಾಜ್ಯ ಸರಕಾರ ಅಸ್ತು

Update: 2017-10-18 16:53 GMT

ಬೆಂಗಳೂರು, ಅ.18: ರಾಜ್ಯದ 33 ಕೆಎಎಸ್ ಅಧಿಕಾರಿಗಳಿಗೆ ಐಎಎಸ್ ಆಗಿ ಬಡ್ತಿ ನೀಡಲು ಕರ್ನಾಟಕ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ.

1998-99ನೆ ಬ್ಯಾಚ್ ನ 34 ಕೆಎಎಸ್  ದರ್ಜೆಯ ಅಧಿಕಾರಿಗಳಿಗೆ ಐಎಎಸ್ ಅಧಿಕಾರಿಗಳಾಗಿ ಪದೋನ್ನತಿ ನೀಡಲು ಕೇಂದ್ರ ಲೋಕಸೇವಾ ಆಯೋಗ ಒಪ್ಪಿಗೆ ನೀಡಿರುವ ಪತ್ರ ಅ.10ರಂದು  ರಾಜ್ಯಸರಕಾರದ ಕೈ ಸೇರಿತ್ತು.

34 ಕೆಎಎಸ್ ಅಧಿಕಾರಿಗಳಿಗೆ ಕೇಂದ್ರ ಲೋಕಸೇವಾ ಆಯೋಗ ಒಪ್ಪಿಕೊಂಡಿದ್ದರೂ ಈ ಪೈಕಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಾರ್ಯದರ್ಶಿ ಬಸವರಾಜೇಂದ್ರ ಅವರ ಬಡ್ತಿಯನ್ನು ಸರಕಾರ ತಡೆ ಹಿಡಿದಿದೆ. 

ಡಾ. ಶಿವರಾಮ ಕಾರಂತ ಬಡಾವಣೆ ಭೂಸ್ವಾಧೀನ ಕೈಬಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡಲು  ಎಸಿಬಿ ಒತ್ತಡ ಹಾಕಿತ್ತು ಎಂದು ಆರೋಪಿಸಿ ಬಸವರಾಜೇಂದ್ರ ಅವರು ಎಸಿಬಿ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಇದೇ ಕಾರಣಕ್ಕೆ ಅವರ  ವಿರುದ್ಧದ ಇಲಾಖಾ ತನಿಖೆ ಪ್ರಗತಿಯಲ್ಲಿರುವ ಹಿನ್ನೆಲೆಯಲ್ಲಿ ಅವರ ಪದೋನ್ನತಿಗೆ ಸರಕಾರ ಬ್ರೇಕ್ ಹಾಕಿದೆ.

ಬಸವರಾಜೇಂದ್ರ ಅವರನ್ನು ಹೊರತುಪಡಿಸಿದರೆ  33 ಕೆಎಎಸ್ ಅಧಿಕಾರಿಗಳಿಗೆ ಭಡ್ತಿ ನೀಡಲು ತನ್ನ ಯಾವುದೇ ತಕಾರು ಇಲ್ಲ ಎಂದು ರಾಜ್ಯ ಸರಕಾರ ಕೇಂದ್ರ ಲೋಕಸೇವಾ ಆಯೋಗಕ್ಕೆ ಒಪ್ಪಿಗೆ ಪತ್ರ ನೀಡಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News