ಬಾಲಕಿಯೊಂದಿಗೆ ಅಸಭ್ಯ ವರ್ತನೆ: ಯುವಕನ ಬಂಧನ
Update: 2017-10-19 19:19 IST
ಮುಂಡಗೋಡ, ಅ.19: ಬಾಲಕಿರೋರ್ವಳಿಗೆ ತನ್ನನ್ನು ಪ್ರೀತಿ ಮಾಡಿ ಮದುವೆಯಾಗು ಎಂದು ಪೀಡಿಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ತಾಲೂಕಿನ ಮರಗಡಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಜಾಫರ್ ತಿಳವಳ್ಳಿ(23) ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.
ಆರೋಪಿ ಜಾಫರ್ ತಿಳವಳ್ಳಿ ಮೂರು ತಿಂಗಳಿಂದ ಬಾಲಕಿಯೊಂದಿಗೆ ದಾರಿಯಲ್ಲಿ ನನ್ನ ಪ್ರೀತಿ ಮಾಡು. ಬೇರೆ ಕಡೆ ಹೋಗಿ ಮದುವೆಯಾಗೋಣ ಎಂದು ಪೀಡಿಸುತ್ತಿದ್ದ. ಈ ಬಾಲಕಿಯು ಮಂಗಳವಾರ ಬೆಳಗ್ಗೆ ಆರೋಪಿಯನ್ನು ಭೇಟಿ ಮಾಡಿ ತಾನು ನಿನ್ನನ್ನು ಮದುವೆಯಾಗುವೆಂದು ಪುಸಲಾಯಿಸಿ ಅಕ್ಕನ ಮನೆಗೆ ಕರೆದುಕೊಂಡು ಹೋಗಿದ್ದಾಳೆ. ಬಳಿಕ ಬಾಲಕಿ ಮನೆಯವರು ಮನೆಯವರು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.