ರಾಜ್ಯ ಸರಕಾರ ನುಡಿದಂತೆ ನೆಡೆಯುತ್ತಿದೆ: ಪುಷ್ಪ ಅಮರ್‍ನಾಥ್

Update: 2017-10-19 16:24 GMT

ಹನೂರು, ಅ.19: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮಾದಲು ಚುನಾವಣೆ ಸಂದರ್ಭ 165 ಪ್ರಣಾಳಿಕೆಗಳನ್ನು ನೀಡಿತ್ತು. ಅದರಲ್ಲಿ 160ಕ್ಕೂ ಹೆಚ್ಚು ಭರವಸೆಗಳನ್ನು ಸಿದ್ದರಾಮಯ್ಯನವ ನೇತೃತ್ವದ ರಾಜ್ಯ ಸರಕಾರ ಈಡೇರಿಸಿ ನುಡಿದಂತೆ ನೆಡೆಯುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಪುಷ್ಪ ಅಮರ್‍ನಾಥ್ ತಿಳಿಸಿದ್ದಾರೆ.

ಕ್ಷೇತ್ರ ವ್ಯಾಪ್ತಿಯ ರಾಜ್ಯದ ಗಡಿಗಂಚಿನ ಗ್ರಾಮಗಳಾದ ಗೋಪಿ ನಾಥಮ್ ,ಆತೂರು ಹಾಗೂ ಇನ್ನಿತರ ಗ್ರಾಮಗಳಲ್ಲಿ ಮನೆಮನೆಗೆ ಕಾಂಗ್ರೆಸ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ  ಕಾಂಗ್ರೆಸ್ ಸರ್ಕಾರವು ಕೈಗೊಂಡ ಎಲ್ಲಾ ಕಾರ್ಯಗಳಲ್ಲೂ ಯಶಸ್ವಿಯಾಗಿದೆ. ಅದೇ ರೀತಿ ಮನೆ ಮನೆ ಕಾಂಗ್ರೆಸ್ ಎಂಬ ಘೋಷ ವಾಕ್ಯದಲ್ಲಿ ಸರ್ಕಾವು ಕೈಗೊಂಡಿದ ಕೆಲಸ ಕಾರ್ಯಗಳಲ್ಲಿ ಪೂರ್ಣಗೊಳಿಸಿದ ಯೋಜನೆಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡುವ ಯೋಜನೆ ಇದಾಗಿದೆ. ಆದ್ದರಿಂದ ಮತದಾರರು ಯಾವುದೇ ಆಮಿಷಗಳಿಗೆ ಕಿವಿಗೊಡದೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದರು.

ಸಂಸದ ದ್ರುವನಾರಯಾಣ್ ಮಾತನಾಡಿ, ಕಾಂಗೆಸ್ ಸರ್ಕಾರವು ಯಾವುದೇ ಕೆಲಸ ಕೈಗೊಂಡರೂ ಯಶಸ್ವಿಯಾಗಿ ನಿರ್ವಹಿಸಿದೆ. ಬಿಜೆಪಿ  ನಾಯಕರು  ಹೊರ ದೇಶಗಳಲ್ಲಿ ಸುತ್ತುವುದೇ ಅಭಿವೃದ್ಧಿ ಕಾರ್ಯ ಎಂದು ಕೊಂಡಿದ್ದಾರೆ ಎಂದು ಟಿಕೀಸಿದರು. 

ಶಾಸಕ ಆರ್. ನರೇಂದ್ರರಾಜೂಗೌಡ, ನೋಟುಗಳ ಅಪನಗದಿಕರಣದಿಂದ ದೇಶದ ಆರ್ಥಿಕತೆಯನ್ನು ಸಂಪೂರ್ಣವಾಗಿ ನಾಶಮಾಡಿದ ಕೇಂದ್ರ ಸರ್ಕಾರ ಸರ್ವಾಧಿಕಾರದ ನಿರ್ಧಾರ ತೆಗೆದುಕೂಂಡಿದೆ ಎಂದು ದೂರಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಆಡಳಿತಕ್ಕೆ ಬಂದ ನಂತರ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ಮಾಡಿದ ಮೇಲೆ ಸಾಕಷ್ಟು ಅಭಿವೃದ್ಧಿ ಕಂಡಿದೆ. ಶ್ರೀ ಕ್ಷೇತ್ರಕ್ಕೆ ಭಕ್ತರ ದಂಡು ಹರಿದು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೂಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿ.ಪಂ ಅಧ್ಯಕ್ಷ ರಾಮಚಂದ್ರ, ಉಪಾಧ್ಯಕ್ಷ ಬಸವರಾಜು. ಮಾಜಿ ಜಿ.ಪಂ.ಸದಸ್ಯರಾದ ಈಶ್ವರ್, ಕೊಪ್ಪಳ್ಳಿ ಮಾದೇವನಾಯಕ, ಪುಟ್ಟರಾಜು ತಾ.ಪಂ ಅಧ್ಯಕ್ಷ ರಾಜು ಮತ್ತಿತರರು ಹಾಜರಿದ್ದರು.




Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News