ಗೋಪಿನಾಥ ಜಲಾಶಯಕ್ಕೆ ಸಂಸದ ದ್ರುವನಾರಯಣ್ ಬಾಗಿನ ಅರ್ಪಣೆ

Update: 2017-10-19 17:00 GMT

ಹನೂರು, ಅ.19: ತಾಲೂಕಿನಲ್ಲಿ ಸುರಿದ ಧಾರಕಾರ ಮಳೆಗೆ ಕ್ಷೇತ್ರದ ಬಹುತೇಕ ಎಲ್ಲಾ ಜಲಾಶಯಗಳು ಭರ್ತಿಯಾದ ಹಿನ್ನೆಲೆ ಗೋಪಿನಾಥ ಜಲಾಶಯಕ್ಕೆ ಸಂಸದ ದ್ರುವನಾರಯಣ್ ಗುರುವಾರ ಬಾಗಿನ ಅರ್ಪಿಸಿದರು.

ನಂತರ ನಡೆದ ಸಭೆಯಲ್ಲಿ ಮಾತನಾಡಿದ ಸಂಸದ ದ್ರುವನಾರಯಣ್, ಮಾಜಿ ಶಾಸಕರಾದ ದಿ.ವೆಂಕಟೇಗೌಡ ಮತ್ತು ದಿ.ರಾಜೂಗೌಡರ ಪರಿಶ್ರಮದ ಫಲವಾಗಿ ನಿರ್ಮಿಸಿದ್ದ 8 ಜಲಾಶಯಗಳಲ್ಲಿ ಬಹುತೇಕ ಜಲಾಶಯಗಳು ಭರ್ತಿಯಾಗಿದೆ. ಕಳೆದ ವರ್ಷಗಳಲ್ಲಿ ಕ್ಷೇತ್ರ ವ್ಯಾಪ್ತಿಯು ಬರಗಾಲದಿಂದ ತತ್ತರಿಸಿತ್ತು. ಇದರಿಂದ ರೈತರು ಕಂಗಳಾಗಿದ್ದರು. ಜಾನುವಾರುಗಳಿಗೆ ಸರಿಯಾದ ಮೇವು ಸಿಗದೇ ಸೋಚನೀಯ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈ ವರ್ಷ ವರುಣನ ಕೃಪೆಯಿಂದ ಜಲಾಶಯಗಳು ಭರ್ತಿಯಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡುವಂತಾಗಿದೆ ಅದರ ಫಲವಾಗಿ ಇಂದು ಬಾಗಿನ ಅರ್ಪಿಸಲಾಯಿತು ಎಂದು ಸ್ಮರಿಸಿದರು.

ಅರಣ್ಯ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡ ಶಾಸಕ, ಸಂಸದರು:  ಗೋಪಿನಾಥವು ಕಾಡಂಚಿನಲ್ಲಿದ್ದು, ರೈತರು ದಿನಿತ್ಯ ಉಪಯೋಗಿಸುವ ವಸ್ತುಗಳನ್ನು ಖರೀದಿಸಲು ಅರಣ್ಯ ಇಲಾಖೆಯ ರಸ್ತೆಯನ್ನೇ ಆಶ್ರಯಿಸಬೇಕಿದೆ ಮತ್ತು ಸರ್ಕಾರದ ಯೋಜನೆಗಳಾದ ಆಶ್ರಯ ವಸತಿ ಯೋಜನೆ ಮತ್ತು ಸ್ವಚ್ಛ ಭಾರತ್‌ ಅಡಿಯಲ್ಲಿ ಶೌಚಾಲಯ ನಿರ್ಮಿಸಕೊಳ್ಳಲು ಹಲವಾರು ಇಟ್ಟಿಗೆ ಮರಳು ಅವಶ್ಯಕವಾಗಿದ್ದು, ಸಾರ್ವಜನಿಕರು ನಿರ್ಮಿಸಿಕೊಳ್ಳಬೇಕಾದರೆ ಅವಶೇಷಗಳು ಅತೀ ಮುಖ್ಯ ಆದರೆ ಇದ್ದನ್ನು ಸರಬರಾಜು ಮಾಡುವ ಸಮಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕಿರುಕುಳ ನೀಡಿರುವುದು ಬೇಸರದ ಸಂಗತಿ. ಆದ್ದರಿಂದ ಕೂಡಲೇ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅನುವು ಮಾಡಿಕೊಡಬೇಕೆಂದು ಸ್ಥಳದಲ್ಲೇ ಆಗಮಿಸಿದ್ದ ಎ.ಸಿ.ಎಫ್ ಅಂಕರಾಜು ರವರಿಗೆ ತಾಕೀತು ಮಾಡಿದರು.

ಹೊಗೆನಕಲ್ ಜಲಪಾತಕ್ಕೆ ಅಭಿವೃದ್ದಿಗೆ ಒತ್ತು: ರಾಜ್ಯದ ಗಡಿಹಂಚಿನ ಭಾಗದಲ್ಲಿರುವ ಹೊಗೆನಕಲ್ ಜಲಪಾತಕ್ಕೆ ಭೇಟಿ ನೀಡಿ ನಂತರ ಮಾತನಾಡಿದ ಶಾಸಕ ನರೇಂದ್ರ ರಾಜೂಗೌಡ, ಕರ್ನಾಟಕದ ನಾನಾ ಭಾಗಗಳಿಂದ ಪ್ರವಾಸಿಗರನ್ನು ತನ್ನತ್ತ ಕೈ ಬಿಸಿ ಕರೆಯುವ ಹೋಗನಕಲ್ ಪಾಲ್ಸ್‌ನ ಅಭಿವೃದ್ದಿಗೆ ದಿ. ಚ್.ಎಸ್.ಮಹದೇವಪ್ರಸಾದ್ ಜಿಲ್ಲಾ ಉಸ್ತುವಾರಿಯಾಗಿದ್ದ ಅಧಿಕಾರದ ಅವಧಿಯಲ್ಲಿ ಸುಮಾರು 25 ಕೋ. ರೂ. ಅಂದಾಜು ವೆಚ್ಚದಲ್ಲಿ ಪ್ರವಾಸೋಧ್ಯಮ ಇಲಾಖೆಯಡಿಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತೆ ಸಭೆಗಳನ್ನು ಕರೆದು ಎಲ್ಲಾ ಯೋಜನೆಯನ್ನೂ ರೂಪಿಸಿಕೊಂಡಿದ್ದರು. ಕಾರಣಾಂತರಗಳಿಂದ ಯೋಜನೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ ಮುಂದಿನ ದಿನಗಳಲ್ಲಿ ಈ ಹೊಗೆನ್‌ಕಲ್ ಜಲಪಾತದ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಲಾಗುವುದೆಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿ.ಪಂ ಅಧ್ಯಕ್ಷ ರಾಮಚಂದ್ರ, ಉಪಾಧ್ಯಕ್ಷ ಬಸವರಾಜು, ತಾಲೂಕು ಪಂಚಾಯತ್ ಅಧ್ಯಕ್ಷ ರಾಜು ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಪುಷ್ಪ ಅಮರ್‌ನಾಥ್, ಮಾಜಿ ಜಿಪಂ ಸದಸ್ಯರಾದ ಈಶ್ವರ್, ಕೊಪ್ಪಳ್ಳಿ ಮಾದೇವನಾಯಕ, ದೇವರಾಜು, ತಾ.ಪಂ.ಅಧ್ಯಕ್ಷ ರಾಜು ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News