ಕಾವೇರಿ ನದಿ ಸ್ವಚ್ಛತೆ ಜಾಗೃತಿ ಯಾತ್ರೆ: ಅ.22ರಂದು ಚಾಲನೆ

Update: 2017-10-19 17:41 GMT

ಮಡಿಕೇರಿ, ಅ.19: ದಕ್ಷಿಣದ ಗಂಗೆ ಕಾವೇರಿ ನದಿಯ ಸ್ವಚ್ಛತೆ ಮತ್ತು ಪಾವಿತ್ರ್ಯತೆಯ ಸಂರಕ್ಷಣೆೆಯ ಹಿನ್ನೆಲೆಯಲ್ಲಿ ಕಳೆದ ಆರು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿರುವ ಜನಜಾಗೃತಿ ತೀರ್ಥಯಾತ್ರೆಗೆ ಈ ಬಾರಿ ಅ.22ರಂದು ತಲಕಾವೇರಿಯಲ್ಲಿ ಚಾಲನೆ ದೊರೆಯಲಿದೆ. ಅಖಿಲ ಭಾರತೀಯ ಸನ್ಯಾಸಿ ಸಂಘ ಹಾಗೂ ಕಾವೇರಿ ನದಿ ಸ್ವಚ್ಛತಾ ಆಂದೋಲನದ ವತಿಯಿಂದ ತಲಕಾವೇರಿಯಿಂದ ಪೂಂಪುಹಾರ್‌ವರೆಗೆ ಯಾತ್ರೆ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಎಂ.ಎನ್.ಚಂದ್ರಮೋಹನ್, ಅ.22ರಂದು ಬೆಳಗ್ಗೆ 8:30ಕ್ಕೆ ತಲಕಾವೇರಿಯಲ್ಲಿ ತೀರ್ಥಯಾತ್ರೆಗೆ ಚಾಲನೆ ನೀಡಲಾಗುತ್ತದೆ.

ತಮಿಳುನಾಡು ಪ್ರಾಂತದ ರಮಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆಯುವ ಯಾತ್ರೆಯಲ್ಲಿ ಕಾವೇರಿ ಮಾತೆಯನ್ನು ಹೊತ್ತ ಜಾಗೃತಿ ರಥ 3 ವಾರಗಳ ಕಾಲ ಕಾವೇರಿ ನದಿ ತಟದಲ್ಲಿ ಸಂಚರಿಸಲಿದೆ.

ಸುದ್ದಿಗೋಷ್ಠಿಯಲ್ಲಿ ಕಾವೇರಿ ನದಿ ಜಾಗೃತಿ ಸಮಿತಿ ಸಂಚಾಲಕ ಡಿ.ಆರ್.ಸೊಮಶೇಖರ್ ಹಾಗೂ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಮುಖರಾದ ಕೆ.ಆರ್.ಶಿವಾನಂದನ್ ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News