ಚಾಮರಾಜನಗರ: ಜೆಡಿಎಸ್ ಜಿಲ್ಲಾ ಘಟಕದ ತುರ್ತುಸಭೆ

Update: 2017-10-19 18:16 GMT

ಚಾಮರಾಜನಗರ, ಅ.19: ಜ್ಯಾತ್ಯತೀತ ಜನತಾದಳವು ಮುಂದಿನ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರದಲ್ಲು ಜಯಗಳಿಸಲು ಅಧ್ಯಕ್ಷರು ಹಾಗೂ ಸದಸ್ಯರು ಮನೆ ಮನೆಗೆ ತೆರಳಿ ನಮ್ಮ ಪಕ್ಷದ ಸಿದ್ಧಾಂತವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕೆಂದು ಹನೂರು ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹಾಗೂ ಕ್ಷೇತ್ರಾಧ್ಯಕ್ಷ ಹಾಗೂ ಚಂದ್ರಗುಪ್ತ ಮೌರ್ಯ ಚಾರಿಟಬಲ್ ಟ್ರಸ್ಟ್ ಬೆಂಗಳೂರಿನ ಸಂಸ್ಥಾಪಕ ಅಧ್ಯಕ್ಷ ಲೋಕೆಶ್ ಎನ್.ಮೌರ್ಯ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬುದವಾರ ಜೆಡಿಎಸ್ ಪಕ್ಷದ ವತಿಯಿಂದ ನಡೆದ ಚಾಮರಾಜನಗರ ಜಿಲ್ಲೆಯ ಎಲ್ಲಾ ತಾಲೂಕಿನ ಹಾಗೂ ಕ್ಷೇತ್ರದ ಅಧ್ಯಕ್ಷರುಗಳ ತುರ್ತುಸಭೆಯಲ್ಲಿ ಅವರು ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕರ್ನಾಟಕವನ್ನು 20 ತಿಂಗಳ ಆಡಳಿತದಲ್ಲಿ ಉತ್ತಮ ಕಾರ್ಯಗಳನ್ನು ಮಾಡುವುದರ ಜೊತೆಗೆ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರನ್ನು ಮುಂದಿನ ಮುಖ್ಯ ಮಂತ್ರಿಯಾಗಿ ಮಾಡುವುದರ ಉದ್ದೇಶದಿಂದ ಜಾತ್ಯತೀತ ಜನತಾದಳವನ್ನು ಜಿಲ್ಲೆಯಲ್ಲಿ ಬಲಪಡಿಸಿವ ಉದ್ದೇಶದಿಂದ ಎಲ್ಲಾ ಗ್ರಾಮಗಳಿಗೂ ತೆರಳಿ ಮನೆಮನೆಗೆ ಕುಮಾರಣ್ಣ ಎನ್ನುವ ಸಂದೇಶದ ಜೊತೆಗೆ  ಮತ ನೀಡುವುದರಿಂದ ರಾಜ್ಯಕ್ಕೆ ಜಿಲ್ಲೆಗೆ ಹಾಗೂವ ಪ್ರಯೋಜನದ ಬಗ್ಗೆ ಅರಿವು ಮೂಡಿಸುವುದಾಗಿ ತಿಳಿಸಿದರು.

ಚಾಮರಾಜನಗರ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ ಕಾಮರಾಜ್ ಮಾತನಾಡಿ, ಅಕ್ಟೋಬರ್ 28ರಂದು ಜಿಲ್ಲಾ ಕಾರ್ಯಕರಿಣಿ ಸಭೆ ಕರೆಯಲಾಗಿದ್ದು ಕಡ್ಡಾಯವಾಗಿ ಪದಾಧಿಕಾರಿಗಳು ಪಟ್ಟಿಯನ್ನು ತಂದು ಅನುಮೊದನೆ ಪಡೆದುಕೊಂಡು ನಿರ್ಣಾಯಿಸಲಾಗುವುದು.
ಪಕ್ಷದ ವತಿಯಿಂದ ಜಿಲ್ಲೆಯೊಳಗೆ ಯಾವುದೇ ಪ್ರತಿಭಟನೆ ಅಥವಾ ಪಕ್ಷದ ಕಾರ್ಯಕ್ರಮ ಮಾಡಬೇಕಾದರೆ ಜಿಲ್ಲಾಧ್ಯಕ್ಷರ ಗಮನಕ್ಕೆ ತರದೆ ಯಾವುದೇ ಕಾರ್ಯಕ್ರಮ ಮಾಡುವಂತಿಲ್ಲ, ಜಿಲ್ಲೆಯೊಳಗೆ ಯಾವುದೇ ಗೊಂದಲ ಮಾಡುವಂತ್ತಿಲ್ಲ ಎಂದು ಕಾಮರಾಜ್ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಸೈಯದ್‍ ಅಕ್ರಮ್, ಮಹಿಳಾ ಜಿಲ್ಲಾಧ್ಯಕ್ಷೆ ಉಷಾ,ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಶಶಿಶೇಖರ್, ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಆಲೂರು ಮಲ್ಲು, ಗುಂಡ್ಲುಪೇಟೆ ಅಧ್ಯಕ್ಷ ಜಯರಾಮು,  ಯಳಂದೂರು ಅಧ್ಯಕ್ಷ ನಂಜುಂಡಸ್ವಾಮಿ, ಚಾಮರಾಜನಗರ ಟೌನ್ ಅಧ್ಯಕ್ಷ ಶಂಕರ್, ಅಲ್ಪ ಸಂಖ್ಯಾತ ಘಟಕ ಜಿಲ್ಲಾ ಅಧ್ಯಕ್ಷ ಸಿಟಿಜನ್ ಫುರ್ಖಾನ್, ನಗರ ಯುವ ಘಟಕ ಅಧ್ಯಕ್ಷ ಪ್ರದೀಪ್‍ ಕುಮಾರ್, ನಗರದ ಮಹಾ ಪ್ರಧಾನ ಕಾರ್ಯದರ್ಶಿ ವರದರಾಜು, ಜಿಲ್ಲಾ ಉಪಾಧ್ಯಕ್ಷ ಮಹೇಶ್‍ಗೌಡ್ರು, ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್, ಜಿಲ್ಲಾ ಕೋಶಾಧ್ಯಕ್ಷ ಎಸ್.ರಾಮಚಂದ್ರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹದೇವನಾಯಕ, ಗುಂಡ್ಲುಪೇಟೆ ಯುವ ಅಧ್ಯಕ್ಷ ಮಣಿಕಂಠ,  ಮಹಿಳಾ ಮುಖಂಡರಾದ ಸುರೇಖಾ,ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಲಿಂಗರಾಜು, ಜಿಲ್ಲಾ ಕಾರ್ಯದರ್ಶಿ ಮಹದೇವಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News