ತಾಲೂಕು ಮಟ್ಟದಲ್ಲಿ ವಕ್ಫ್ ಸಲಹಾ ಸಮಿತಿ ರಚನೆ: ರಫೀಉಲ್ಲಾ

Update: 2017-10-19 18:25 GMT

ಚಿಕ್ಕಬಳ್ಳಾಪುರ, ಅ.19: ಜಿಲ್ಲೆಯಲ್ಲಿನ ವಕ್ಫ್ ಸಂಸ್ಥಗೆ ಸೇರಿದ ಸ್ಥಿರ ಮತ್ತು ಚರಾಸ್ತಿಗಳನ್ನು ಸಂರಕ್ಷಿಸಿ, ಅಭಿವೃದ್ಧಿಗೊಳಿಸಲು ತಾಲೂಕು ಮಟ್ಟದಲ್ಲಿ ವಕ್ಫ್ ಸಲಹಾ ಸಮಿತಿಗಳನ್ನು ಶೀಘ್ರದಲ್ಲಿ ರಚಿಸಲಾಗುವುದೆಂದು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಬಿ.ಎಸ್. ರಫೀಉಲ್ಲಾ ತಿಳಿಸಿದ್ದಾರೆ.

ನಗರದ ಮದೀನಾ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ವಕ್ಫ್ ಮಂಡಳಿಯ ಆದೇಶದನ್ವಯ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ವಕ್ಫ್ ಸಲಹಾ ಸಮಿತಿಗಳನ್ನು ರಚಿಸಿ ವಕ್ಫ್ ಸಂಸ್ಥೆಗೆ ಸೇರಿದ ಸ್ಥಿರ ಮತ್ತು ಚರಾಸ್ತಿಗಳನ್ನು ಸಂರಕ್ಷಣೆ ಮಾಡಿ ಅಭಿವೃದ್ಧಿಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲೆಯಲ್ಲಿರುವ ವಕ್ಫ್ ಆಸ್ತಿ ಸಂರಕ್ಷಣೆಗೆ ಪ್ರಥಮ ಆದ್ಯತೆ ನೀಡುವುದಾಗಿ ತಿಳಿಸಿದ ಅವರು, ನೂತನ ವಕ್ಫ್ ಸಲಹಾ ಸಮಿತಿಯ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಜಿಲ್ಲಾದ್ಯಂತ ವಕ್ಫ್ ಸಂಸ್ಥೆಗಳನ್ನು ಬಲಿಷ್ಠಗೊಳಿಸಿ ಸಮುದಾಯದ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ಸಿದ್ಧಪಡಿಸಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಈ ವೇಳೆ ವಕ್ಫ್ ಸಂಸ್ಥೆಗಳನ್ನು ಕಡ್ಡಾಯವಾಗಿ ವಕ್ಫ್ ಮಂಡಳಿಯಲ್ಲಿ ನೋಂದಣಿ ಮಾಡಿಸಲು ಅಭಿಯಾನ ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಎಂ. ರಿಝ್ವಾನ್, ಖಲೀಲ್‍ಪಾಷ, ಮೀರ್ ಸಖೀ ಅಹ್ಮದ್, ಸದಸ್ಯರಾದ ತಮೀಮ್‍ ಪಾಷ, ಅಲಹಾಜ್ ತಾಜ್‍ ಪಾಷ, ಮೊಹ್ಮದ್ ಇಕ್ಬಾಲ್, ಸೈಯದ್ ಅಫ್ಸರ್, ಝೀಯಾಉಲ್ಲಾ, ಸೈಯದ್ ಶಕೀಲ್ ಅಹಮದ್, ಬಿ.ಎಚ್. ಅಬ್ದುಲ್ ರಫೀಖ್, ಅಲ್ತಾಫ್, ರೀಯಾಝ್ ಪಾಷ, ಗೌರಿಬಿದನೂರು ನಗರಸಭೆಯ ಅಧ್ಯಕ್ಷ ಕಲೀಂಉಲ್ಲಾ, ಚಾಂದ್‍ಪಾಷ ಸಿಎಸ್, ನಿಸಾರ್ ಅಹಮದ್, ಅಕ್ರಂ ಶರೀಫ್, ಅನ್ಸರ್‍ಖಾನ್, ಜಿಲ್ಲಾ ವಕ್ಫ್ ಅಧಿಕಾರಿ ಫೌಝೀಯಾ ಸಿದ್ದೀಖಾ, ಖಲೀಲ್ ಅಹಮದ್, ನವೀದ್‍ಪಾಷ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News