ನದಿಯಲ್ಲಿ ಮುಳುಗಿ ಅಪ್ಪ-ಮಗ ಮೃತ್ಯು
Update: 2017-10-20 19:57 IST
ಮಂಡ್ಯ, ಅ.20: ಕೆ.ಆರ್.ಪೇಟೆ ತಾಲೂಕು ಕಿಕ್ಕೇರಿ ಹೋಬಳಿಯ ಗೊಂದಿಹಳ್ಳಿ ಗ್ರಾಮದಲ್ಲಿ ಹಸು ತೊಳೆಯಲು ಹೋಗಿ ಅಪ್ಪ ಹಾಗೂ ಮಗ ಹೇಮಾವತಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ಗ್ರಾಮದ ಕುಮಾರ(42) ಹಾಗು ಮಗ ತೇಜು(4) ಮೃತಪಟ್ಟವರೆಂದು ಗುರುತಿಸಲಾಗಿದೆ.
ಇವರು ದೀಪಾವಳಿ ಪ್ರಯುಕ್ತ ಹಸುವನ್ನು ತೊಳೆಯಲು ಗ್ರಾಮದಲ್ಲಿರುವ ಹೇಮಾವತಿ ನದಿಗೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ.
ಮೈತೊಳೆಯುತ್ತಿದ್ದಾಗ ಬೆದರಿದ ಹಸು ಹೊಳೆಗೆ ಹಗ್ಗ ಸಮೇತ ಅಪ್ಪ ಮಗನನ್ನು ಎಳೆದೊಕೊಂಡು ಹೋಗಿ ಇಬ್ಬರೂ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಕಿಕ್ಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.