ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ಮಸೀದಿ ಆಡಳಿತ ಮಂಡಳಿಯಿಂದ ಧರಣಿ
Update: 2017-10-20 22:27 IST
ಮಡಿಕೇರಿ, ಅ.20: ಕುಶಾಲನಗರವನ್ನು ಕಾವೇರಿ ತಾಲೂಕಾಗಿ ಪರಿಗಣಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಸರಣಿ ನಿರಶನದ ಅಂಗವಾಗಿ ಕುಶಾಲನಗರದ ಜಾಮೀಯ ಹಾಗೂ ಹಿಲಾಲ್ ಮಸೀದಿ ಆಡಳಿತ ಮಂಡಳಿ ಆಶ್ರಯದಲ್ಲಿ ಧರಣಿ ನಡೆಯಿತು.
ಪಟ್ಟಣದ ಕಾರು ನಿಲ್ದಾಣದ ವೇದಿಕೆಯಲ್ಲಿ ಧರಣಿ ನಡೆಸಿದ ಮಸೀದಿ ಸಮಿತಿಗಳ ಪ್ರಮುಖರು ಕಾವೇರಿ ತಾಲೂಕಿಗೆ ಆಗ್ರಹಿಸಿ ಘೊಷಣೆಗಳನ್ನು ಕೂಗಿದರು. ರಾಜ್ಯ ಹೆದ್ದಾರಿಯಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿದರು.
ಈ ಸಂದರ್ಭ ಜಾಮೀಯ ಮಸೀದಿ ಸಮಿತಿ ಅಧ್ಯಕ್ಷ ಹಲೀಂ, ಹಿಲಾಲ್ ಮಸೀದಿ ಸಮಿತಿ ಕಾರ್ಯದರ್ಶಿ ರೆಹಮುಲ್ಲಾ, ಪ್ರಮುಖರಾದ ರಫೀಕ್, ಖಲೀಲ್, ಶಂಸುದ್ದೀನ್, ಅಝೀಝ್ , ಅಯೂಬ್, ನಜೀರ್, ತನ್ವೀರ್, ಕಾವೇರಿ ತಾಲೂಕು ಹೋರಾಟ ಸಮಿತಿ ಸಂಚಾಲಕರಾದ ವಿ.ಪಿ.ಶಶಿಧರ್ ಮತ್ತಿತರರು ಹಾಜರಿದ್ದರು.