ರಸ್ತೆ ಅಪಘಾತ: ಮೂವರಿಗೆ ಗಾಯ
Update: 2017-10-21 20:10 IST
ಮಂಡ್ಯ, ಅ.21: ಕ್ಯಾಂಟರೊಂದು ಅಫೇ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಅಫೇ ವಾಹನದಲ್ಲಿದ್ದ ಮೂವರು ಗಾಯಗೊಂಡ ಘಟನೆ ಕೆಆರ್ ಪೇಟೆ ತಾಲೂಕಿನ ಕಿಕ್ಕೇರಿ ಸಮೀಪದ ಹರಿಯಲಾದಮ್ಮ ಹಾಗೂ ಗಂಗನಹಳ್ಳಿ ಗೇಟ್ ಬಳಿ ನಡೆದಿದೆ.
ತಾಲೂಕಿನ ವಳಗೆರೆಮೆಣಸ ಗ್ರಾಮದ ಕೃಷ್ಣೇಗೌಡ(48), ಈರೇಗೌಡ(27), ಸಾಕಮ್ಮ(53) ಗಾಯಗೊಂಡಿದ್ದು, ತಾಲೂಕು ಆಸ್ಪತ್ರೆಗೆ ಸೇರಿಸಲಾಗಿದೆ.
ಅಫೇ ವಾಹನದಲ್ಲಿ ಚನ್ನರಾಯಪಟ್ಟಣದಿಂದ ಗ್ರಾಮಕ್ಕೆ ರಾಗಿ ಹಾಗೂ ಕುರಿಗಳನ್ನು ಖರೀದಿಸಿ ತರುತ್ತಿದ್ದಾಗ ಹಿಂಬಂದಿಯಲ್ಲಿ ಕ್ಯಾಂಟರ್ ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.