×
Ad

ಕ್ಷುಲ್ಲಕ ಜಗಳ: ಓರ್ವನಿಗೆ ಇರಿತ

Update: 2017-10-21 20:12 IST

ಮದ್ದೂರು, ಅ.21: ಬಾರ್‍ನಲ್ಲಿ ಯುವಕರ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದ ವೇಳೆ ಓರ್ವನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

ತಾಲೂಕಿನ ಮಾದಪುರದೊಡ್ಡಿ ಗ್ರಾಮದ ರಮೇಶ್ ಅವರ ಪುತ್ರ ಪ್ರವೀಣ್(32) ಗಾಯಗೊಂಡಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಈ ಸಂಬಂಧ ರಾಕೇಶ್ ಮತ್ತು ಆತನ ಆರುಮಂದಿ ಸಹಚರರ ವಿರುದ್ಧ ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News