ಕೊಳಕ್ಕೆ ಬಿದ್ದು ವೃದ್ಧ ಆತ್ಮಹತ್ಯೆ
Update: 2017-10-21 22:33 IST
ಮೈಸೂರು, ಅ.21: ಕೊಳದಲ್ಲಿ ಬಿದ್ದು ವೃದ್ಧರೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ನೇತಾಜಿ ನಗರದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ವೇಣುಗೋಪಾಲ್ (65)ಎಂದು ಗುರುತಿಸಲಾಗಿದೆ.
ವೇಣುಗೋಪಾಲ್ ಅವರು ಮಾನಸಿಕವಾಗಿ ಅಸ್ವಸ್ಥರಾಗಿದ್ದರು ಎನ್ನಲಾಗಿದೆ.
ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.