ನದಿಗೆ ಬಿದ್ದು ಎಂಬಿಎ ವಿದ್ಯಾರ್ಥಿನಿ ಮೃತ್ಯು
Update: 2017-10-22 19:03 IST
ಶಿವಮೊಗ್ಗ, ಅ. 22: ಆಕಸ್ಮಿಕವಾಗಿ ಕಾಲುಜಾರಿ ತುಂಗಾ ನದಿಗೆ ಬಿದ್ದು ಯುವತಿಯೋರ್ವಳು ಮೃತಪಟ್ಟ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಹಿಷಿಯಲ್ಲಿ ನಡೆದಿದೆ.
ನಗರದ ನಿವಾಸಿ ಗಾನ(22) ಮೃತಪಟ್ಟ ಯುವತಿ ಎಂದು ಗುರುತಿಸಲಾಗಿದೆ.
ಗಾನ ಅವರು ತನ್ನ ಕುಟುಂಬದ ಸದಸ್ಯರೊಂದಿಗೆ ಮಹಿಷಿಗೆ ಆಗಮಿಸಿದ್ದು, ಇಲ್ಲಿನ ತುಂಗಾ ನದಿಯ ಬಳಿ ಆಟವಾಡುವ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಯುವತಿಯ ಮೃತದೇಹವನ್ನು ನದಿಯಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರ ವಶಕ್ಕೆ ಪೊಲೀಸರು ಒಪ್ಪಿಸಿದ್ದಾರೆಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಸಬ್ ಇನ್ ಸ್ಪೆಪೆಕ್ಟರ್ ಗುರುರಾಜ್‍ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಬಗ್ಗೆ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.