ಚಾಮರಾಜನಗರ: ಅ.25ರಂದು ಸರಕಾರಿ ನೌಕರರ ಮುಷ್ಕರ

Update: 2017-10-22 17:35 GMT

ಚಾಮರಾಜನಗರ, ಅ.22: ಕರ್ನಾಟಕ ರಾಜ್ಯ 6ನೆ ವೇತನ ಆಯೋಗ ಅಂತಿಮ ವರದಿ ಸಲ್ಲಿಸುವ ಪೂರ್ವದಲ್ಲಿ 2017ರ ಏ.1ರಿಂದ ಪೂರ್ವಾನ್ವಯವಾಗಿ ಶೇ.30 ಮಧ್ಯಂತರ ಪರಿಹಾರ ಮಂಜೂರು ಹಾಗೂ ನವೆಂಬರ್ 2017ರ ಅಂತ್ಯದಲ್ಲಿ ಅಂತಿಮ ವರದಿ ಅಯೋಗದಿಂದ ಪಡೆದು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಅ.25ರಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಧ್ಯಾಹ್ನ 1 ಗಂಟೆಗೆ ಮುಷ್ಕರ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಜಿಲ್ಲಾ ಶಾಖೆಯ ಅಧ್ಯಕ್ಷ ಆರ್.ರಾಜಪ್ಪತಿಳಿಸಿದ್ದಾರೆ.

ನಗರದ ನ್ಯಾಯಲಯ ರಸ್ತೆಯಲ್ಲಿ ಇರುವ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಚೇರಿಯಲ್ಲಿ ನೌಕರ ಸಂಘದ ಹಾಗೂ ಎಲ್ಲ ಇಲಾಖೆಗಳ ನೌಕರರ ಸಂಘದ ತುರ್ತು ಸಭೆ ಕರೆದು ಅವರು ಮಾತನಾಡಿತ್ತಿದ್ದರು.

ಕೇಂದ್ರ ಸರಕಾರದ 7ನೆ ವೇತನ ಆಯೋಗದ ವೇತನ, ಭತ್ಯೆ ಮತ್ತು ತುಟ್ಪಿಭತ್ಯೆ ಶಿಪಾರಸುಗಳನ್ನು ರಾಜ್ಯ ಸರಕಾರಿ ನೌಕರಿಗೂ ಯಥವತ್ತಾಗಿ ಆನುಷ್ಠಾನ ಗೊಳಿಸಿ ಏ.1ರ 2017ರಿಂದ ಪೂರ್ವಾನ್ವಯವಾಗಿ ವೇತನ ಮತ್ತು ಭತ್ಯೆಗಳನ್ನು ಪರಿಷ್ಕರಿಸಬೇಕಾದ ಅಗತ್ಯತೆ ಬಗ್ಗೆ ಹಾಗೂ ಅದಕ್ಕೆ ಪೂರಕವಾಗಿ ದಿನಾಂಕ 1-4-2017ರಿಂದ ಪೂರ್ವಾನ್ವಯವಾಗಿ ಶೇ.30 ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲು ಹಾಗೂ ವರದಿಯ ಸಂಪೂರ್ಣ ಅನುಷ್ಠಾನಕ್ಕಾಗಿ ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ತಾಲೂಕು ನೌಕರ ಸಂಘಗಳು ತಹಶೀಲ್ದಾರ್ ಕಚೇರಿ ಮುಂದೆ ತಾಲೂಕಿನ ಸರಕಾರಿ ನೌಕರರು ಒಗ್ಗೂಡಿ ಮುಷ್ಕರ ನಡೆಸಲು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News