ರೋಹಿಂಗ್ಯ ಬಿಕ್ಕಟ್ಟಿನ ನಿಲುವಿನಿಂದ ಹೆಸರು ಹಾಳು ಮಾಡಿಕೊಳ್ಳಬೇಡಿ: ಆಂಗ್ ಸಾನ್ ಸೂಕಿಗೆ ಸಲಹೆ ನೀಡಿದ್ದ ಮೋದಿ

Update: 2017-10-23 08:17 GMT

ಢಾಕಾ, ಅ. 23: ಮ್ಯಾನ್ಮಾರ್ ನ ರೋಹಿಂಗ್ಯ ಬಿಕ್ಕಟ್ಟಿನ ವಿಚಾರದಲ್ಲಿ ಅಲ್ಲಿನ ನಾಯಕಿ ಆಂಗ್ ಸಾನ್ ಸೂಕಿ ಅವರು ತಾವು ತಾಳಿರುವ ನಿಲುವಿನಿಂದಾಗಿ ತಮ್ಮ ಹೆಸರನ್ನು ತಾವೇ ಹಾಳು ಮಾಡಿಕೊಳ್ಳಬಾರದೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿದ್ದಾರೆಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

ರವಿವಾರ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರನ್ನು ಭೇಟಿಯಾಗಿ ಮಾತನಾಡಿದ ಸುಷ್ಮಾ ಈ ಸಂದರ್ಭ ಪ್ರಧಾನಿ ಮೋದಿಯ ಸಲಹೆಯ ಬಗ್ಗೆ ಅವರಿಗೆ ತಿಳಿಸಿದರು. 4ನೆ ಬಾಂಗ್ಲಾದೇಶ-ಭಾರತ ಜಂಟಿ ಸಲಹಾ ಆಯೋಗದ ಸಭೆಯೊಂದರಲ್ಲಿ ಸುಷ್ಮಾ ಅವರು ಬಾಂಗ್ಲಾದೇಶದ ವಿದೇಶಾಂಗ ಸಚಿವರಾದ ಎಎಚ್ ಮೆಹಮೂದ್ ಅಲಿ ಜತೆಗೆ ಭಾಗವಹಿಸಿದರು.
‘‘ಆಕೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ ಹೆಸರಿದೆ. ಅದನ್ನು ಹಾಳುಗೆಡಹುವುದು ಬೇಡ’’ ಎಂದು ಪ್ರಧಾನಿ ತಿಳಿಸಿದ್ದಾರೆಂದು ಸುಷ್ಮಾ ಅವರು ಶೇಖ್ ಹಸೀನಾರನ್ನು ಆಕೆಯ ನಿವಾಸದಲ್ಲಿ ಭೇಟಿಯಾದ ಸಂದರ್ಭ ತಿಳಿಸಿದರು.

ಪ್ರಧಾನಿ ಮೋದಿ ಈ ರೀತಿಯಗಿ ಯಾವಾಗ ಸಲಹೆ ನೀಡಿದ್ದಾರೆಂದು ಇನ್ನೂ ತಿಳಿದಿಲ್ಲವಾದರೂ ಅವರು ಕಳೆದ ತಿಂಗಳು ಮ್ಯಾನ್ಮಾರ್ ಗೆ ಭೇಟಿ ನೀಡಿದಾಗ ಸೂಕಿ ಅವರನ ಜತೆ ಮಾತನಾಡಿದಾಗ ಹೇಳಿರಬೇಕೆಂದು ಬಾಂಗ್ಲಾ ಮಾಧ್ಯಮಗಳು ವಿವರಿಸಿವೆ.

ಮ್ಯಾನ್ಮಾರ್ ತನ್ನ ರಾಷ್ಟ್ರೀಯರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕೆಂಬ ಹಾಗೂ ಉಗ್ರವಾದದ ವಿರುದ್ಧದ ಹೋರಾಟದಲ್ಲಿ ಮುಗ್ಧರನ್ನು ಬಲಿಪಶು ಮಾಡಬಾರದು ಎಂಬ ಬಾಂಗ್ಲಾದೇಶದ ನಿಲುವಿಗೆ ಸುಷ್ಮಾ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆಂದು ಬಾಂಗ್ಲಾದೇಶ ಪ್ರಧಾನಿಯ ಮಾಧ್ಯಮ ಕಾರ್ಯದರ್ಶಿ ಇಹ್ಸಾನುಲ್ ಕರೀಂ ಹೇಳಿದ್ದಾರೆ.

‘‘ಮ್ಯಾನ್ಮಾರ್ ಉಗ್ರರನ್ನು ಶಿಕ್ಷಿಸಬಹುದು, ಮುಗ್ಧರನ್ನಲ್ಲ,’’ ಎಂದು ಸುಷ್ಮಾ ಹೇಳಿದ್ದಾರೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News