×
Ad

ಹೊನ್ನಾವರ : ಮದ್ಯದಂಗಡಿ ಮುಚ್ಚುವಂತೆ ಮನವಿ

Update: 2017-10-23 18:30 IST

ಹೊನ್ನಾವರ,ಅ.23: ತಾಲೂಕಿನ ಮಂಕಿ ಗ್ರಾಮದ ಕುಂಬಾರ ಕೇರಿ ಕ್ರಾಸ್ ಹತ್ತಿರ ಮದ್ಯದಂಗಡಿ ನಿರ್ಮಾಣಕ್ಕೆ ಪರವಾನಿಗೆ ನೀಡಬಾರದೆಂದು ಗ್ರಾಮದ ಮಹಿಳಾ  ಸಂಘಟನೆಯವರು ಸೇರಿ ಮದ್ಯದಂಗಡಿ ಎದುರು ಜಮಾಯಿಸಿ ಮದ್ಯದಂಗಡಿ ಮುಚ್ಚುವಂತೆ ಆಗ್ರಹಿಸಿ ಅಬಕಾರಿ ಅಧಿಕಾರಿಗಳಿಗೆ ಮನವಿ ನೀಡಿದರು.

ತಾಲೂಕಿನ ಮಂಕಿ ಮಾವಿನ ಕಟ್ಟೆ ಹತ್ತಿರ ಹೆದ್ದಾರಿ ಪಕ್ಕವಿದ್ದ ಮದ್ಯದಂಗಡಿಯನ್ನು ಮುಚ್ಚಿದ ನಂತರ ರಾಜಕೀಯ ಹಿತಾಶಕ್ತಿಗಳು ಸೇರಿ ಮಂಕಿ ಕುಂಬಾರ ಕೆರಿ ಕ್ರಾಸ್ ಹತ್ತಿರ ರಾಷ್ಟ್ರಿಯ ಹೆದ್ದಾರಿ ಸಮೀಪವಿರುವ ಕೊಕ್ಕೆಶ್ವರ ದೇವಸ್ಥಾನಕ್ಕೆ ಹೊಗುವ ದಾರಿಯಲ್ಲಿ ಮದ್ಯದಂಗಡಿಯನ್ನು ನಿರ್ಮಾಣ ಮಾಡಿದ್ದು ಪಂಚಾಯತ್ ನಿಂದ ಯಾವುದೇ ಅನುಮತಿ ಪಡೆಯದೇ ಆರಂಭಿದ್ದಲ್ಲದೇ,ಸುತ್ತಮುತ್ತಲು ಜನವಸತಿ ಪ್ರದೇಶವಾಗಿದ್ದು,ಶಾಲೆ,ದೇವಸ್ಥಾನ,ಅಷ್ಟೆ ಅಲ್ಲದೇ ರಾóಷ್ಟ್ರೀಯ ಹೆದ್ದಾರಿ ಸಮಿಪವಿದ್ದು ಅದೇಲ್ಲವನ್ನು ಗಮನಿಸದೇ ಕಾನೂನು ನಿಯಮವನ್ನು ಊಲ್ಲಂಗಿಸಿದ್ದಾರೆ,ಮದ್ಯದಂಗಡಿ ಆರಂಬದಿಂದ ಸಂಸಾರಗಳು ಬೀದಿಪಾಲಾಗುತ್ತಿವೆ,ಎಂದು ಮಹಿಳಾ ಮಣಿಗಳು ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಮದ್ಯದಂಗಡಿ ಮುಚ್ಚಲು ಮನವಿಯಲ್ಲಿ ಆಗ್ರಹಿಸಿದರು.
ಪಂಚಾಯತ ಸದಸ್ಸರಾದ ಊಷಾ ನಾಯ್ಕ ಮಾತನಾಡಿ ಯಾವುದೇ ಕಾರಣಕ್ಕು ಇಲ್ಲಿ ಮದ್ಯದಂಗಡಿ ಆರಂಭಿಸಲು ಬೀಡುವುದಿಲ್ಲ,ಇಲ್ಲಿ ಮದ್ಯದಂಗಡಿ ಆರಂಭಿಸಬಾರದೆಂದು ಹಲವು ಬಾರಿ ಸಂಭಂದ ಪಟ್ಟ ಇಲಾಖೆಗಳಿಗೆ ತಿಳಿಸಿದರು ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ ಎಂದರು.

ಗ್ರಾಮ ಪಂಚಾಯ್ತ ಅಧ್ಯಕ್ಷ ಸತಿಸ್ ನಾಯ್ಕ ಮಾತನಾಡಿ ಪಂಚಾಯತ್ ಸದಸ್ಯರೆಲ್ಲರು ಸಭೆ ಸೇರಿ ಒಮ್ಮತದಿಂದ ಇಲ್ಲಿ ಮದ್ಯದಂಗಡಿಗೆ ಅನುಮತಿ ನೀಡಬಾರದೆಂದು ಅಧಿಕಾರಿಗಳಿಗೆ ಮನವಿ ಮಾಡಿದ್ದೆವೆ,ಪಂಚಾಯ್ತನಿಂದ ಯಾವುದೇ ಅನುಮತಿ ಪಡೆಯದೆ ಇಲ್ಲಿ ಮದ್ಯ ಅಂಗಡಿ ಆರಂಭಿಸಿದ್ದರೆ,ಜನರಿಗೆ ಹಾನಿಕಾರಕವಾಗುವ ವಿಷಯದಲ್ಲಿ ನಮ್ಮ ವೀರೋಧವಿದೆ ಎಂದರು.
ಈ ಸಂದರ್ಬದಲ್ಲಿ ಆಷಾ ನಾಯ್ಕ,ವಿಜಯ ನಾಯ್ಕ,ಮಹೇಶ್ ನಾಯ್ಕ,ಅಣ್ಣಪ್ಪ ನಾಯ್ಕ, ಸೇರಿದಂತೆ ಮಹಿಳಾ ಸಂಘಟನೆಯ ಸದಸ್ಯರು,ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News