ವಿದ್ಯುತ್ ಶಾಕ್ : ಕೂಲಿಕಾರ್ಮಿಕ ಸಾವು
Update: 2017-10-23 19:52 IST
ಶಿವಮೊಗ್ಗ, ಅ. 23: ಅಡಕೆ ಮರವೇರಿ ಕೊನೆ ಕೀಳುತ್ತಿದ್ದ ಕೂಲಿಕಾರ್ಮಿಕನೋರ್ವ ವಿದ್ಯುತ್ ಶಾಕ್‍ನಿಂದ ಮೃತಪಟ್ಟಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬೆಜ್ಜುವಳ್ಳಿ ಸಮೀಪದ ದಾನಸಾಲೆ ಗ್ರಾಮದಲ್ಲಿ ವರದಿಯಾಗಿದೆ.
ಅಪ್ಪು ಮೃತಪಟ್ಟ ಕೂಲಿಕಾರ್ಮಿಕ ಎಂದು ಗುರುತಿಸಲಾಗಿದೆ. ಇವರು ದಿನೇಶ್ ಎಂಬುವರಿಗೆ ಸೇರಿದ ಅಡಕೆ ತೋಟದಲ್ಲಿ ಕೊನೆ ಕೀಳುವ ಕೆಲಸದಲ್ಲಿ ನಿರತವಾಗಿದ್ದಾಗ, ಮರದ ಸಮೀಪವೇ ಹಾದು ಹೋಗಿದ್ದ ವಿದ್ಯುತ್ ಲೈನ್‍ಗೆ ತಾಗಿದೆ. ಶಾಕ್‍ನಿಂದ ಅವರು ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಈ ಸಂಬಂಧ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.