ಸರಗಳ್ಳನ ಬಂಧನ: 4 ಲಕ್ಷ ರೂ ಚಿನ್ನಾಭರಣ ವಶ
ತುಮಕೂರು,ಅ.23:ನಗರದ ವಿವಿಧೆಡೆ ಸರಗಳ್ಳತನ ಮಾಡಿದ್ದ ಆರೋಪಿಯನ್ನು ತಿಲಕ್‍ಪಾರ್ಕು ಪೊಲೀಸರು ಬಂಧಿಸಿ, ಆತನಿಂದ 4 ಲಕ್ಷ ರೂ ಬೆಲೆ ಬಾಳುವ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲೂಕು ಮರುಗಮಲ್ಲ ಗ್ರಾಮದ ಬಾಳೆಹಣ್ಣು ನಿವಾಸಿ ಮೊಹಮದ್ ದಸ್ತಗೀರ್ ಯಾನೆ ದಸ್ತಗಿರ್ (41) ಎಂದು ಗುರುತಿಸಲಾಗಿದೆ.ಇತ್ತೀಚಗೆ ನಗರದಲ್ಲಿ ನಡೆದ ಸರಗಳ್ಳತನಗಳನ್ನು ಪತ್ತೆ ಹಚ್ಚಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾಗೋಪಿನಾಥ್ ಅವರ ಮಾರ್ಗದರ್ಶನದಲ್ಲಿ ರಚಿಸಲಾಗಿದ್ದ ತಂಡ ಅಗತ್ಯ ಮಾಹಿತಿಗಳನ್ನು ಕಲೆ ಹಾಕಿದ ನಂತರ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯೇ ತನಿಖೆಯ ವೇಳೆ ಒಪ್ಪಿಕೊಂಡಿರುವಂತೆ ನಗರದ ದೇವರಾಯಪಟ್ಟಣ, ಜಯನಗರ, ಹಿರೇಹಳ್ಳಿ ಹಾಗೂ ಹೆಬ್ಬೂರುಗಳಲ್ಲಿ ಸರಗಳ್ಳತನ ನಡೆಸಿರುವುದಾಗಿ ತಿಳಿಸಿದ್ದು,ಕಳವು ಮಾಡಿದ ಚಿನ್ನದ ಸರಗಳನ್ನು ಹೆಬ್ಬೂರಿನಲ್ಲಿ ಮಾರಾಟ ಮಾಡಿದ್ದು, ಒಟ್ಟು 130 ಗ್ರಾಂ ತೂಕದ ಸುಮಾರು 4 ಲಕ್ಷ ರೂ ಬೆಲೆ ಬಾಳುವ ನಾಲ್ಕು ಚಿನ್ನದ ಸರಗಳನ್ನು ವಶಪಡಿಸಿಕೊಂಡಿರುತ್ತಾರೆ.