ಮಳೆ ಹಾನಿಗೊಳಗಾದವರಿಗೆ ಪರಿಹಾರ ಚೆಕ್ ವಿತರಣೆ
Update: 2017-10-23 21:54 IST
ಮೈಸೂರು,ಅ.23: ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕನಕಗಿರಿ,ಶ್ರೀರಾಂಪುರ,ಗುಂಡುರಾವ್ ನಗರ ದಲ್ಲಿ ಭಾರೀ ಮಳೆಯಿಂದ ಹಾನಿಗೊಳಗಾದವರಿಗೆ ಶಾಸಕ ಎಂ.ಕೆ.ಸೋಮಶೇಖರ್ ಪರಿಹಾರ ವಿತರಿಸಿದರು.
ಕನಕಗಿರಿಯ ಸಮುದಾಯ ಭವನದಲ್ಲಿ ಒಟ್ಟು ನಾಲ್ಕೂವರೆ ಲಕ್ಷರೂ. ಪರಿಹಾರ ಧನವನ್ನು 120 ಮಂದಿಗೆ ವಿತರಿಸಿದರು. ಬಳಿಕ ಮಾತನಾಡಿದ ಅವರು ಈ ಭಾರೀ ಹೆಚ್ಚಿನ ಮಳೆ ಸುರಿದು ನಗರದ ಹಲವು ಕಡೆಗಳಲ್ಲಿ ಅನಾಹುತ ಸೃಷ್ಟಿಯಾಗಿದೆ. ಹಲವರ ಆಸ್ತಿಪಾಸ್ತಿಗಳು ನಷ್ಟವಾಗಿದೆ. ಮಳೆಯಿಂದ ಹಾನಿಯಾಗಿರುವ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ನೀಡುತ್ತಿದ್ದೇವೆ ಎಂದರು. ಈ ಸಂದರ್ಭ ಉಪಸ್ಥಿತರಿದ್ದ 120 ಮಂದಿಗೆ ಹಾನಿಗೆ ತಕ್ಕಂತಹ ಪರಿಹಾರದ ಚೆಕ್ ವಿತರಿಸಿದರು. ಈ ಸಂದರ್ಭ ತಹಶೀಲ್ದಾರ್ ರಮೇಶ್ ಬಾಬು, ಉಪವಿಭಾಗಾಧಿಕಾರಿಗಳು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.