ಶುದ್ಧ ಜಲ ಅಭಿಯಾನದ ಕುರಿತು ಬೀದಿ ನಾಟಕ ಪ್ರದರ್ಶನ

Update: 2017-10-23 16:28 GMT

ಹನೂರು, ಅ. 23: ಗ್ರಾಮಾಂತರ ಪ್ರದೇಶದ ಜನರು ಕುಡಿಯಲು ಅಶುದ್ಧ ನೀರನ್ನು ಬಳಸುವುದರಿಂದ ನಾನಾ ತರದ ಕಾಯಿಲೆಯಿಂದ ಬಳಲುತ್ತಿದ್ದಾರೆ, ಆದ್ದರಿಂದ ಶುದ್ಧ ನೀರು ಕುಡಿದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕರಿ ಉಮೇಶ್‌ಪೂಜಾರಿ ತಿಳಿಸಿದರು.

ಹನೂರು ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಶುದ್ಧಗಂಗಾ ನೀರು ವಿತರಣಾ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ಶುದ್ಧ ಜಲ ಅಭಿಯಾನದ ಕುರಿತು ಬೀದಿ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶುದ್ಧ ನೀರು ಕುಡಿಯುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು, ಕಾಯಿಲೆಯಿಂದ ದೇಹವನ್ನು ಮುಕ್ತಗೊಳಿಸಬಹುದರ ಜೊತೆಗೆ ನಿರ್ಮಲ ಪರಿಸರವನ್ನು ರೂಪಿಸಬಹುದು ಎಂದರಲ್ಲದೆ, ಪಟ್ಟಣದಲ್ಲಿ ಇಂದು 600 ಕುಟುಂಬಗಳು ಶುದ್ಧ ಗಂಗಾ ನೀರಿನ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಮನೆಗೊಂದು ಶೌಚಾಲಯ, ಊರಿಗೊಂದು ಜೀವಜಲಾ, ಶಿಕ್ಷಣಕ್ಕೊಂದು ವಿದ್ಯಾಲಯ ಎಷ್ಟು ಅಗತ್ಯವೊ ಹಾಗೇ ನಮ್ಮೆಲ್ಲರಿಗೂ ಶುದ್ಧ ನೀರು ಅತ್ಯವಶ್ಯಕ ಎಂದು ತಿಳಿಸಿದರು. ಅಶುದ್ಧ ನೀರಿನಿಂದ ಜನತೆ ವಿವಿಧ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘವು ಸರ್ಕಾರದ ಸಹಯೋಗದೊಂದಿಗೆ ಪ್ರತಿ ಗ್ರಾಮಗಳಲ್ಲಿಯೂ ಶುಧ್ದ ಗಂಗಾ ನೀರಿನ ಘಟಕವನ್ನು ಸ್ಥಾಪಿಸಿ ಶುದ್ಧ ನೀರನ್ನು ನೀಡುತ್ತಿದೆ, ಸಾರ್ವಜನಿಕರು  ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಪಟ್ಟಣ ಪಂ. ಅಧ್ಯಕ್ಷೆ ಮಮತಾ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘವು ಸ್ವಸಹಾಯ ಸಂಘ, ಹಾಲು ಒಕ್ಕೂಟಗಳಿಗೆ, ಸಂತ್ರಸ್ತರಿಗೆ ಧನ ಸಹಾಯ ಇನ್ನು  ವಿವಿಧ ರೀತಿಯಲ್ಲಿ ಅಭಿವೃದ್ದಿಯತ್ತ ಕೈಜೊಡಿಸುತ್ತಿದ್ದು, ಸಾರ್ವಜನಿಕರು ಇದರ  ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಹೇಶ್ ಮತ್ತು ತಂಡದವರಿಂದ ಬೀದಿ ನಾಟಕ ಪ್ರದರ್ಶನ ಮಾಡುವ ಮೂಲಕ ಸಾರ್ವಜನಿಕರಿಗೆ ಶುದ್ಧ ನೀರಿನ ಬಗ್ಗೆ ಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿ ಶುದ್ಧ ಗಂಗಾ ಮೇಲ್ವಿಚಾರಕ ರಘು, ಶುದ್ದ ಗಂಗಾ ನೀರಿನ ಘಟಕ ನಿರ್ವಹಣೆ ಸಹಾಯಕಿ ಚಂದ್ರಮ್ಮ ಮತ್ತು ಸಾರ್ವಜನಿಕರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News