ಹನೂರು : ಕ್ರಿಕೆಟ್ ಪಂದ್ಯಾಟದಲ್ಲಿ ಟಿಪ್ಪುಹಂಟರ್ಸ್‌ ತಂಡಕ್ಕೆ ಜಯ

Update: 2017-10-23 16:34 GMT

ಹನೂರು, ಅ. 23 : ಕ್ಷೇತ್ರ ವ್ಯಾಪ್ತಿಯ ದೂಮ್ಮನಗದ್ದೆ ಗ್ರಾಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಎರಡು ದಿನಗಳ ಕಾಲ ನೆಡದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹನೂರಿನ ಟಿಪ್ಪುಹಂಟರ್ಸ್‌ ತಂಡ ವಿಜೇಯ ಗಳಿಸಿತು.

ದೂಮ್ಮಗದ್ದೆಯ ಡಿ.ಜಿ.ಟಿ ಪ್ರೀನ್ಸ್ ತಂಡದವರು ಆಯೋಜಿಸಸಿದ್ದ ಈ ಪಂದ್ಯಾವಳಿಯ ಸಮರೋಪ ಸಮಾರಂಭದಲ್ಲಿ ಬಹಮಾನವನ್ನು ವಿತರಿಸಿ ನಂತರ ಮಾತನಾಡಿದ ಶಿಕ್ಷಕ ಚಂದ್ರನ್‌ನಾಯಕ್‌ರವರು ಕ್ರೀಡೆಯಲ್ಲಿ ಸೋಲು ಗೆಲುವು ಸಹಜ, ಆದುದರಿಂದ ಕ್ರೀಡಾಪಟುಗಳು ಸೋಲು ಗೆಲುವುವನ್ನು ಸಮಾನ ವಾಗಿ ಸ್ವೀಕರಿಸಿ ಕ್ರೀಡೆಯಿಂದ ದೈಹಿಕವಾಗಿ ಮಾನಸೀಕವಾಗಿ ಸದೃಡ ದೇಹ ಹೊಂದಬೇಕಾದರೆ ಕ್ರೀಡೆ ಅತೀ ಮುಖ್ಯ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

ದೀಪಾವಳಿ ಹಬ್ಬದ ಪ್ರಯುಕ್ತ ಎರಡು ದಿನಗಳ ಕಾಲ ನೆಡದಂತಹ ಈ ಪಂದ್ಯಾವಳಿಯಲ್ಲಿ ಮಾರ್ಟಳ್ಳಿ, ಕಾಂಚಳ್ಳಿ, ತಂಗಮೇಡು , ನಾಲ್‌ರೋಡ್, ದೂಮ್ಮನಗದ್ದೆ ಒಟ್ಟು 5 ತಂಡಗಳು ರಾಮಪುರ, ದಂಟಳ್ಳಿ, ಹನೂರಿನ ಟಿಪ್ಪುಹಂಟರ್ಸ್‌ ತಂಡ ಈಗೇ ಒಟ್ಟು 17 ತಂಡಗಳು ಭಾಗವಹಿದ್ದವು. ಇದ್ದರಲ್ಲಿ ಹನೂರಿನ ಟಿಪ್ಪುಹಂಟರ್ಸ್‌ ತಂಡ ಪ್ರಥಮ ಬಹುಮಾನವನ್ನು ಪಡೆದುವುದರ ಮುಖಾಂತರ ವಿಜೇತವಾಯಿತು . ದ್ವಿತಿಯ ಬಹುಮಾನವನ್ನು ದೂಮ್ಮನಗದ್ದೆಯ ಎ ತಂಡ ದ್ವಿತೀಯ ಸ್ಥಾನ ಪಡೆದು ಕೊಂಡಿತು ಮತ್ತು  ದೂಮ್ಮನಗದ್ದೆ ಗ್ರಾಮದ ಮುಖಂಡರು ಹಾಗೂ ಡಿ.ಜಿ.ಟಿ ತಂಡದ ವತಿಯಿಂದ ಟೂರ್ನಿಯಲ್ಲಿ ಅತ್ಯುತ್ತಮವಾದ ರೀತಿಯಲ್ಲಿ ಆಟವನ್ನು ಆಡಿ ಆಯ್ಕೆಯಾದಂತಹ ಆಟಗಾರರಾದ ಸಂಜು(ರಿಕೇಶಿ) , ಆಶೋಕ್, ಶ್ರೀನಿವಾಸ್ , ಇದ್ರೀಸ್‌ಪಾಸ್ ಮುತ್ತು, ಅಭಿ, ದಿನೇಶ್,ಶಿವು , ಫಾಜೀಲ್, ಅಮ್ಜು, ಭಾಲಾಜಿ, ಮಹೇಶ್ ,ಇಸ್ರೇಲ್, ಆರ್‌ಮುಗ, ಇನ್ನಿತರ ಆಟಗಾರರನ್ನು ಗೌರವಿಸಿ ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News