ಬೆಳ್ಳೂರು ನಾಡಕಛೇರಿ ಎದುರು ಪ್ರತಿಭಟನೆ

Update: 2017-10-23 16:46 GMT

ನಾಗಮಂಗಲ, ಅ.23: ತಾಲೂಕಿನ ಬೆಳ್ಳೂರು ನಾಡಕಛೇರಿಯಲ್ಲಿ ಆರ್‍ಟಿಸಿ, ಪಿಂಚಿಣಿ, ಆದಾಯ, ಜಾತಿ, ಇನ್ನಿತರೆ ದೃಢೀಕರಣ ಪತ್ರಗಳನ್ನು ವ್ಯವಸ್ಥಿತವಾಗಿ ನೀಡದೆ ಕಛೇರಿ ಸಿಬ್ಬಂದಿ ರೈತರನ್ನು ಅಲೆದಾಡಿಸುತ್ತಿದ್ದಾರೆ ಎಂದು ಆರೋಪಿಸಿ ಸೋಮವಾರ ಪ್ರತಿಭಟನೆ ನಡೆಯಿತು.
ರೈತಸಂಘದ ನೇತೃತ್ವದಲ್ಲಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಾರ್ವಜನಿಕರು,  ತಾಲೂಕು ಆಡಳಿತ ಮತ್ತು ತಹಶೀಲ್ದಾರ್ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬೆಳ್ಳೂರು ನಾಡಕಛೇರಿಯಲ್ಲಿ ಬೆಳಗಿನಿಂದ ಸಂಜೆವರೆಗೂ ಸರತಿ ಸಾಲಿನಲ್ಲಿ ನಿಂತರೂ ಒಂದು ಆರ್‍ಟಿಸಿ ಪಡೆಯಲು ರೈತರು ದುಸ್ಸಾಹಸ ಪಡಬೇಕು. ಬೇಕೆಂದೇ ಆರ್‍ಟಿಸಿ ನೀಡಲು ತೀವ್ರ ವಿಳಂಬ ಮಾಡಲಾಗುತ್‍ಇದೆ. ಆದರೆ, ಮಧ್ಯವರ್ತಿಗಳ ಕೈಗೆ ಸುಲಭವಾಗಿ ಆರ್‍ಟಿಸಿ ಸಿಗುತ್ತಿವೆ ಎಂದು ಅವರು ಆರೋಪಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಶಿವಣ್ಣ, ಸಾರ್ವಜನಿಕರಿಂದ ಮನವಿ ಸ್ವೀಕರಿಸಿ ಸಮಸ್ಯೆಯನ್ನು ಕೂಡಲೇ ಬಗೆಹರಿಸುವುದಾಗಿ ಭರವಸೆ ನೀಡಿದ ನಂತರ, ಪ್ರತಿಭಟನೆ ಹಿಂಪಡೆಯಲಾಯಿತು.

ರೈತಸಂಘದ ಮುಖಂಡರಾದ ಹೆರಗನಹಳ್ಳಿ ಶಾಂತಣ್ಣ, ಶ್ರೀರಾಂಪುರ ರಂಗೇಗೌಡ, ದಡಗ ಸತೀಶ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಆಟೋ ಶಿವಣ್ಣ, ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News