ಬಸ್ ಹತ್ತಲು ಹೋಗಿ ಕಾಲು ಕಳೆದುಕೊಂಡ ವಿದ್ಯಾರ್ಥಿ
Update: 2017-10-24 22:19 IST
ಮೈಸೂರು, ಅ.24: ಚಲಿಸುತ್ತಿದ್ದ ಬಸ್ ಗೆ ಹತ್ತಲು ಹೋಗಿ ವಿದ್ಯಾರ್ಥಿಯೊಬ್ಬ ತನ್ನ ಕಾಲನ್ನು ಕಳೆದುಕೊಂಡಿರುವ ಘಟನೆ ನಗರದ ಸಿಟಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಉಲ್ಲೇಖ್ ಪುಟ್ಟಸ್ವಾಮಿ ಕಾಲು ಕಳೆದುಕೊಂಡ ವಿದ್ಯಾರ್ಥಿ. ಈತ ನಗರದ ಸದ್ವಿದ್ಯಾ ಪ್ರೌಢಶಾಲೆಯಲ್ಲಿ 9ನೆ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದು, ಬನ್ನೂರಿನಿಂದ ಶಾಲೆಗೆ ಬರುತ್ತಿದ್ದ. ತರಗತಿ ಮುಗಿಸಿಕೊಂಡು ತಮ್ಮ ಊರು ಬನ್ನೂರಿಗೆ ಹೋಗಲು ಸಿಟಿ ಬಸ್ ನಿಲ್ದಾಣಕ್ಕೆ ಬಂದಿದ್ದಾನೆ.
ಬಸ್ ಆಗಲೇ ಹೊರಟಿದ್ದು ಆ ಬಸ್ ಹತ್ತಲು ಯತ್ನಿಸಿದ್ದು ಆಯತಪ್ಪಿ ಕೆಳಗೆ ಬಿದಿದ್ದಾನೆ. ಇದರಿಂದ ಈತನ ಒಂದು ಕಾಲು ಅದೇ ಬಸ್ ಚಕ್ರಕ್ಕೆ ಸಿಲುಕಿದ್ದು ಕೂಡಲೇ ಬಸ್ ಡ್ರೈವರ್ ಬಸ್ ನಿಲ್ಲಿಸಿದ್ದಾನೆ. ಆದರೂ ಕಾಲ ಮೇಲೆ ಹರಿದ ಬಸ್ ಚಕ್ರದಿಂದ ವಿದ್ಯಾರ್ಥಿಯ ಕಾಲಿನ ಪಾದ ಸಂಪೂರ್ಣ ಮುರಿದು ಹೋಗಿದ್ದು ತಕ್ಷಣ ಆತನನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಈ ಸಂಬಂದ ಬಸ್ ಡ್ರೈವರ್ ಕಂಡಕ್ಟರ್ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.