ಪೆಟ್ರೋಲ್ ಟ್ಯಾಂಕ್ ಸ್ಫೋಟ: ಲಕ್ಷಾಂತರ ರೂ. ನಷ್ಟ
Update: 2017-10-24 23:40 IST
ಚಿಕ್ಕಮಗಳೂರು, ಅ.24: ಕಾರಿನ ಪೆಟ್ರೋಲ್ ಟ್ಯಾಂಕ್ ದುರಸ್ತಿಪಡಿಸುತ್ತಿದ್ದ ವೇಳೆ ಸ್ಫೋಟಗೊಂಡ ಪರಿಣಾಮ ಇಡೀ ಗ್ಯಾರೇಜ್ ಸುಟ್ಟು ಕರಕಲಾದ ಘಟನೆ ನಗರದ ನಲ್ಲೂರು ಗೇಟ್ ಸಮೀಪ ಮಂಗಳವಾರ ನಡೆದಿದೆ.
ನಲ್ಲೂರು ಗೇಟ್ ಸಮೀಪದ ಎ1 ಮೋಟಾರ್ಸ್ ಗ್ಯಾರೇಜ್‌ನಲ್ಲಿ ಈ ದುರಂತ ಸಂಭವಿಸಿದೆ. ಕಾರೊಂದರ ಪೆಟ್ರೋಲ್ ಟ್ಯಾಂಕ್‌ನ್ನು ವೆಲ್ಡಿಂಗ್ ಮಾಡುತ್ತಿದ್ದ ವೇಳೆ ಪೆಟ್ರೋಲ್ ಟ್ಯಾಂಕ್ ಸಿಡಿದಿದೆ.
ಈ ಸಮಯದಲ್ಲಿ ಭಾರೀ ಸ್ಪೋಟದ ಸದ್ದು ಕೇಳಿಸಿದ್ದು, ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವಘಡದ ಸಮಯದಲ್ಲಿ ಗ್ಯಾರೇಜ್‌ನಲ್ಲಿದ್ದ ಎರಡು ಕಾರುಗಳು ಕೂಡ ಸುಟ್ಟು ಭಸ್ಮವಾಗಿವೆ.
ಈ ಕುರಿತು ಗ್ಯಾರೇಜ್ ಮಾಲಕ ಅರವಿಂದ್ ನಗರ ಪೊಲೀಸರಿಗೆ ದೂರು ನೀಡಿದ ಅನ್ವಯ ಪ್ರಕರಣ ದಾಖಲಿಸಲಾಗಿದೆ.