ಯುದ್ಧ ವಿಮಾನಗಳ ಕವಾಯತು..!
Update: 2017-10-24 23:50 IST
ಸದಾ ಅತ್ಯಧಿಕ ವಾಹನಗಳ ಸಂಚಾರ ಇರುವ ಆಗ್ರಾ-ಲಕ್ನೊ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಮಂಗಳವಾರ ವಾಯುಪಡೆಯ ವಿಮಾನಗಳು ಭೂಸ್ಪರ್ಶ ಮಾಡುವ ಹಾಗೂ ಆಗಸಕ್ಕೆ ನೆಗೆಯುವ ಕವಾಯತು ನಡೆಸಿದವು. ಯುದ್ಧದಂತಹ ತುರ್ತು ಸನ್ನಿವೇಶದಲ್ಲಿ ವಾಯುದಾಳಿ ಅಥವಾ ಶತ್ರುನೆಲೆಯನ್ನು ನಾಶಗೊಳಿಸುವ ಸಂದರ್ಭ ಬಂದಾಗ ಯುದ್ಧವಿಮಾನಗಳು ವಾಯುನೆಲೆ ಬಿಟ್ಟು ಇತರ ಪ್ರದೇಶದಲ್ಲೂ, ಅಂದರೆ ರಸ್ತೆ, ಬಯಲು ಪ್ರದೇಶದಲ್ಲೂ ಭೂಸ್ಪರ್ಶ ಅಥವಾ ಆಗಸಕ್ಕೆ ನೆಗೆಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ವಾಯುಪಡೆಯ ಸಿಬ್ಬಂದಿಗೆ ತರಬೇತಿ ನೀಡಲು ಈ ಕವಾಯತು ಹಮ್ಮಿಕೊಳ್ಳಲಾಗಿದ್ದು ಸುಖೋಯ್, ಜಾಗ್ವಾರ್, ಮಿರಾಜ್ ಸೇರಿದಂತೆ ವಾಯುಪಡೆಯ 16ಕ್ಕೂ ಹೆಚ್ಚು ವಿಮಾನಗಳು ಕವಾಯತಿನಲ್ಲಿ ಪಾಲ್ಗೊಂಡಿದ್ದವು.