×
Ad

ಜನರು ಮೆಚ್ಚುವಂತಹ ಕೆಲಸ ಮಾಡಿರುವುದು ಜೆಡಿಎಸ್ ಮಾತ್ರ: ವೇಣುಗೋಪಾಲ್

Update: 2017-10-25 23:03 IST

ಕೊಳ್ಳೇಗಾಲ, ಅ.24: ಪ್ರತಿಯೊಬ್ಬ ಕಾರ್ಯಕರ್ತರು ಪಕ್ಷದಲ್ಲಿ ಅಧ್ಯಕ್ಷನೇ ಎಂದು ಜೆಡಿಎಸ್ ಜಿಲ್ಲಾ ವೀಕ್ಷಕ ವೇಣುಗೋಪಾಲ್ ಅವರು ಹೇಳಿದರು.

ಪಟ್ಟಣದ ಬಾಪುನಗರ ಬಡಾವಣೆಯಲ್ಲಿ ನಡೆದ ಜೆಡಿಎಸ್ ಮುಖಂಡರುಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಕ್ಷದ ಚಿಹ್ನೆ ಇಟ್ಟು ಪಕ್ಷ ಸಂಘಟನೆ ಮಾಡಲು ಯಾರು ಎಲ್ಲಿ ಬೇಕಾದರೂ ಕಾರ್ಯಕ್ರಮ ನಡೆಸಬಹುದು ಎಂದರು.

ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಏಟಿಗೆ ಎದುರೇಟು ನೀಡುವುದು ಜೆಡಿಎಸ್ ಪಕ್ಷ ಮಾತ್ರ. ಕುಮಾರಸ್ವಾಮಿಯವರು ಅಧಿಕಾರದಲ್ಲಿ ಇದ್ದಾಗ ರೈತಪರ, ಮಹಿಳೆಯರ ಪರ ಹಾಗೂ ಬಡವರ ಹೆಚ್ಚಿನ ಮಟ್ಟದಲ್ಲಿ ಸ್ಪಂದಿಸುತ್ತಿದ್ದರು. ಜನರು ಮೆಚ್ಚುವಂತಹ ಕೆಲಸ ನೀಡಿರುವುದು ಜೆಡಿಎಸ್ ಮಾತ್ರ ಎಂದು ಹೇಳಿದರು.

ಮುಖಂಡ ಮುಳ್ಳೂರು ಶಿವಮಲ್ಲು ಮಾತನಾಡಿ, ಕುಮಾರಸ್ವಾಮಿರವರು 20 ತಿಂಗಳು ಮಾದರಿ ಆಡಳಿತ ನೀಡುವ ಮೂಲಕ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ ಎಂದರು.

ಸಭೆಯಲ್ಲಿ ಪಕ್ಷದ ಜಿಲ್ಲಾ ವೀಕ್ಷಕ ಬೀರನಹುಂಡಿ ಬಸವಣ್ಣ, ಜಿ.ಪಂ ಮಾಜಿ ಉಪಾಧ್ಯಕ್ಷ ಶಿವಮೂರ್ತಿ, ರಾಜ್ಯ ಪ್ರದಾನ ಕಾರ್ಯದರ್ಶಿ ಶೀವಮಲ್ಲೇಗೌಡ, ಮುಖಂಡರಾದ ಅಝೀಕ್ ಅಹಮದ್, ಸೈಯದ್ ಅಕ್ರಂ, ಕೃಷಣಮೂರ್ತಿ, ನಾಗ ಸುಂದರ್, ಟೌನ್ ಅಧ್ಯಕ್ಷ ಇರ್ಫಾನ್, ಉಪಾಧ್ಯಕ್ಷ ರಜನಿಕಾಂತ್, ಬಾಬು, ಮಂಜುನಾಥ್‍ಗೌಡ, ಅಜುಮನ್‍ವುಲ್ಲಾ, ಎಸ್‍ಸಿ ಘಟಕದ ವೆಂಕಟರಾಮ ಹಾಗೂ ಇನ್ನೀತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News