ಕೋಲಾರ: ಕಾನೂನು ವಿದ್ಯಾರ್ಥಿ ನಿಲಯಕ್ಕೆ ಮೂಲಭೂತ ಸೌಕರ್ಯ ಒದಗಿಸಲು ಆಗ್ರಹಿಸಿ ಮನವಿ
ಕೋಲಾರ, ಅ.25: ನಗರದ ನಚಿಕೇತನ ನಿಲಯದ ಬಾಲಕರ ಕಾನೂನು ವಿದ್ಯಾರ್ಥಿ ನಿಲಯಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಹಾಗೂ ಹುಳು ಬಿದ್ದಿರುವ ತರಕಾರಿಗಳನ್ನು ಸರಬರಾಜು ಮಾಡುತ್ತಿರುವ ಸಮಾಜ ಕಲ್ಯಾಣ ಇಲಾಖೆಯ ಅಸಮರ್ಥತೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಲ್ಲಿನ ವಿದ್ಯಾರ್ಥಿಗಳು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಚಿಕೇತನ ನಿಲಯದಲ್ಲಿರುವ ವಿದ್ಯಾರ್ಥಿ ನಿಲಯದಲ್ಲಿ ಗ್ರಂಥಾಲಯ ವ್ಯವಸ್ಥೆ ಇರುವುದಿಲ್ಲ, ಸೊಳ್ಳೆ ಪರದೆಗಳಿಲ್ಲ, ಹಾಸಿಗೆ, ದಿಂಬು, ಬೆಡ್‍ಶೀಟ್, ಕಟ್ಟಡ ದುರಸ್ತಿ, ಸ್ವಚ್ಚತೆ ಇಲ್ಲದಿರುವುದು, ವಿದ್ಯುತ್ ದುರಾವಸ್ಥೆ, ಕ್ರೀಡಾ ಸಾಮಾಗ್ರಿಗಳು ಕೊರತೆ, ವಾಟರ್ ಪಿಲ್ಟರ್, ಸೋಲಾರ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆಯಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಲು ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಂತೋಷ್, ನಂದೀಶ್, ಪ್ರಮೋದ್, ಪ್ರಸನ್ನ, ಮಣಿಕಂಠ, ರಾಮಮೂರ್ತಿ, ಕಾರ್ತಿಕ್, ಪ್ರೇಮ್‍ಕುಮಾರ್, ಕೇಶವ ಇನ್ನಿತರರು ಉಪಸ್ಥಿತರಿದ್ದರು.