ಮೃಗಾಲಯಕ್ಕೆ ಚಿರತೆ ಭೇಟಿ...!

Update: 2017-10-26 18:02 GMT

ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಬೆಳ್ಳಂಬೆಳಿಗ್ಗೆ ಚಿರತೆಯೊಂದು ಹೊರಗಿನಿಂದ ಬಂದು ಆತಂಕ ಸೃಷ್ಟಿಸಿತು. ಮೃಗಾಲಯದ ಅರಣ್ಯ ಸಿಬ್ಬಂದಿ ಗುರುವಾರ ಮರವೇರಿ ಕುಳಿತಿದ್ದ ಚಿರತೆಯನ್ನು ನೋಡಿ ಮೃಗಾಲಯದ ಚಿರತೆಯೇನಾದರೂ ತಪ್ಪಿಸಿಕೊಂಡು ಮರವೇರಿ ಕುಳಿತಿದೆಯೇ ಎಂದು ಪರಿಶೀಲಿಸಿದಾಗ ಮೃಗಾಲಯಕ್ಕೆ ಸಂಬಂಧಿಸಿದ ಚಿರತೆಗಳೆಲ್ಲವೂ ಬೋನಿನಲ್ಲಿಯೇ ಇರುವುದು ದೃಢಪಟ್ಟಿತು. ತಕ್ಷಣ ಸ್ಥಳಕ್ಕಾಗಮಿಸಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿಗಳು, ಸತತ ಎರಡು ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ ಕೊನೆಗೂ ಬೋನಿಗೆ ಚಿರತೆ ಬಿದ್ದಿದೆ. ಅರವಳಿಕೆ ಚುಚ್ಚುಮದ್ದು ನೀಡುವ ಮೂಲಕ ಚಿರತೆಯನ್ನು ಸೆರೆ ಹಿಡಿಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor