×
Ad

ಕೊಳ್ಳೇಗಾಲ: 25 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಶಾಸಕ ಆರ್.ನರೇಂದ್ರ ಚಾಲನೆ

Update: 2017-10-26 23:51 IST

ಕೊಳ್ಳೇಗಾಲ, ಅ.26: ತಾಲೂಕಿನ ದೊಡ್ಡಿಂದುವಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಎಂಎಡಿಪಿ ಯೋಜನೆಯಡಿಯಿಂದ  25 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಹನೂರು ಕ್ಷೇತ್ರದ ಶಾಸಕ ಆರ್.ನರೇಂದ್ರ ಚಾಲನೆ ನೀಡಿದ್ದಾರೆ.

ತಾಲೂಕಿನ ದೊಡ್ಡಿಂದುವಾಡಿ ಗ್ರಾಮದಲ್ಲಿ ಮಠದ ಬೀದಿ ಹಾಗೂ ಮಸಿದಿಬೀದಿಯಲ್ಲಿ  25 ಲಕ್ಷ ರೂ. ವೆಚ್ಚದ ಸಿಸಿರಸ್ತೆ ಚರಂಡಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೇರವೇರಿಸಿ ನಂತರ ಅವರು ಮಾತನಾಡಿದರು.

ಈ ದೊಡ್ಡಿಂದುವಾಡಿ ಗ್ರಾಮದ ಅಭಿವೃದ್ಧಿಗೆ ಎಲ್ಲಾ ಬಡಾವಣೆಗಳ ರಸ್ತೆ ಹಾಗೂ ಚರಂಡಿ ಕಾಮಾಗಾರಿಗೆ ಮುಖ್ಯಮಂತ್ರಿಯವರ ವಿಶೇಷ ಅನುದಾನದಡಿಯಿಂದ 4 ಕೋಟಿ ರೂ.ಅನುದಾನದ ಮೂಲಕ ಎಲ್ಲಾ ಬಡಾವಣೆಗಳ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು ಹೆಚ್ಚಿನ ಅನುದಾನ ನೀಡುವ ಮೂಲಕ ಇನ್ನಷ್ಷು ಅಭಿವೃದ್ಧಿ ಪಡಿಸಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.

ಈ ಸಂಧರ್ಭದಲ್ಲಿ  ತಾಪಂ ಅಧ್ಯಕ್ಷ ರಾಜು, ಗ್ರಾಮ ಪಂಚಾಯತ್ ಅಧ್ಯಕ್ಷ ಲೋಕೇಶ್, ಉ.ಪಾ.ಮಾದೇವಿ, ಕಾರ್ಯದರ್ಶಿಮರಿಸ್ವಾಮಿ ಸದಸ್ಯರಾದ ಚಿಕ್ಕತಾಯಮ್ಮ, ಸುರೇಶ್, ಫಯಾಝ್, ಸೈಯಾದ್‍ ಅಮಾಝ್, ಮುಖಂಡರುಗಳಾದ ಬಸವರಾಜು, ಕೃಷ್ಣಗೌಡರು, ನಟರಾಜಗೌಡ, ಗುತ್ತಿಗೆದಾರಯಾದ, ಇನ್ನೂ ಕಾಂಗ್ರೇಸ್ ಮುಖಂಡರುಗಳು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News