ಜೆಸಿಐ ಸಂಸ್ಥೆಯಿಂದ ಸಮಾಜಮುಖಿ ಕಾರ್ಯ: ವಾಸುದೇವ ಬೆನ್ನೂರ್
ಸೊರಬ, ಅ.27: ಜೆಸಿಐ ವೈಜಯಂತಿ ಸಂಸ್ಥೆಯು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ವಲಯ 24ರ ಉಪಾಧ್ಯಕ್ಷ ವಾಸುದೇವ ಬೆನ್ನೂರ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಂಸ್ಥೆಯಲ್ಲಿ ಅತ್ಯುತ್ತಮ ತರಬೇತುದಾರರಿದ್ದು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಮ್ಮೇಳನಗಳನ್ನು ಆಯೋಜಿಸಲಾಗುತ್ತಿದೆ. ಸಮಾಜ ಸೇವೆ, ಉದ್ಯಮದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿ ಉತ್ತಮ ಹೆಸರು ಮಾಡಿರುವ ಗಣ್ಯರನ್ನು ಕಮಲ ಪತ್ರ ಅವಾರ್ಡ್ ನೀಡಲಾಗುತ್ತದೆ. ಪ್ರಸಕ್ತ ವರ್ಷ ಈ ಅವಾರ್ಡ್ ಸೊರಬಕ್ಕೆ ಸಂದಿದ್ದು, ಅತೀವ ಸಂತೋಷ ತಂದಿದೆ. ಉದ್ಯಮ ಹಾಗೂ ಸಮಾಜ ಸೇವಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 2018ರ ನಿಯೋಜಿತ ಘಟಕದ ಅಧ್ಯಕ್ಷ ಡಿ.ಎಸ್.ಪ್ರಶಾಂತ್ ಅವರಿಗೆ ಈ ಪ್ರಶಸ್ತಿ ದೊರೆಕಿದೆ ಎಂದರು.
2018ರ ನಿಯೋಜಿತ ಅಧ್ಯಕ್ಷ ಡಿ.ಎಸ್.ಪ್ರಶಾಂತ್ ಮಾತನಾಡಿ, ನಾನು ಸಮಾಜ ಸೇವೆ ಹಾಗೂ ಉದ್ಯಮ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದು, ನಿಯೋಜಿತ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿರುವುದು ನನ್ನ ಸೇವಾ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.
ಮುಂದಿನ ದಿನಗಳಲ್ಲೂ ಅತೀ ಹೆಚ್ಚಿನ ಸೇವಾ ಕಾರ್ಯಗಳನ್ನು ಮುಂದುವರಿಸಿ ಸೊರಬ ಘಟಕವನ್ನು ಎಲ್ಲ ಪದಾಧಿಕಾರಿಗಳ ಸಹಕಾರದಿಂದ ಇನ್ನೂ ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಜೆಸಿಐ ಅಧ್ಯಕ್ಷ ವೀರೇಶಗೌಡ, ಪ್ರಮುಖರಾದ ವಿ.ಎಚ್.ಪಂಚಾಕ್ಷರಿ, ಶಿವಕುಮಾರ್, ಡಿ.ಎಸ್.ಶಂಕರ್, ಮಂಜಣ್ಣ, ಅಶೋಕ್ ಟೇಮ್ಕರ್, ಹಾಲೇಶ್ ನವುಲೆ, ಎಸ್. ಕೃಷ್ಣನಂದ, ಮಹೇಶ ಮತ್ತಿತರರಿದ್ದರು.