ಬೈಕ್ ನಿಂದ ಆಯತಪ್ಪಿ ಬಿದ್ದು ಮಹಿಳೆ ಮೃತ್ಯು
Update: 2017-10-28 22:00 IST
ಮದ್ದೂರು, ಅ.29: ಮಗನ ಮದುವೆ ಆಮಂತ್ರಣ ಪತ್ರವನ್ನು ಹಂಚಲು ತೆರಳಿದ್ದ ವೇಳೆ ಬೈಕ್‍ನಿಂದ ಆಯತಪ್ಪಿ ಬಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ಶುಕ್ರವಾರ ಸಂಜೆ ತಾಲೂಕಿನ ಕೆ.ಹೊನ್ನಲಗೆರೆ ಬಳಿ ನಡೆದಿದೆ.
ಮಳವಳ್ಳಿ ತಾಲೂಕು ತೊರೆಕಾಡನಹಳ್ಳಿ ವೀರಭದ್ರೇಗೌಡರ ಪತ್ನಿ ಲಕ್ಷ್ಮಮ್ಮ(43) ಮೃತಪಟ್ಟವರೆಂದು ಗುರುತಿಸಲಾಗಿದೆ.
ಲಕ್ಷ್ಮಮ್ಮ ಅವರು ತನ್ನ ಮಗನ ಮದುವೆಯ ಲಗ್ನ ಪತ್ರಿಕೆ ಹಂಚಲು ಮಗನ ಜತೆ ಬೈಕ್‍ನಲ್ಲಿ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.