×
Ad

ವಿದ್ಯುತ್ ಕಳವು: ಮೂವರು ಆರೋಪಿಗಳ ಬಂಧನ

Update: 2017-10-28 22:13 IST

ತುಮಕೂರು, ಅ.28: ವಿದ್ಯುತ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಸ್ಕಾಂ ಜಾಗೃತದಳದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೊರಟಗೆರೆ ತಾಲೂಕಿನ ಬುಕ್ಕಪಟ್ಟಣದ ಚಂದ್ರಯ್ಯ, ಮಧುಗಿರಿ ತಾಲೂಕಿನ ಚಿನ್ನೇನಹಳ್ಳಿಯ ಲಕ್ಷ್ಮೀನಾರಾಯಣರೆಡ್ಡಿ, ತಿಪಟೂರು ತಾಲೂಕಿನ ಹುಚ್ಚನಹಳ್ಳಿಯ ಚಿಕ್ಕಣ್ಣ ಎಂಬುವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಆರೋಪಿಗಳು ಒಟ್ಟು 1,99,932 ರೂ. ವಿದ್ಯುತ್ ಕಳವು ಮಾಡಿ ಹಣ ಪಾವತಿಸದೇ, ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದರು, ಬೆಸ್ಕಾಂ ಪೊಲೀಸ್ ಅಧೀಕ್ಷ ಎಂ.ನಾರಾಯಣ ಹಾಗೂ ಡಿವೈಎಸ್ಪಿ ಭಾಸ್ಕರ್ ವಕ್ಕಲಿಗ ಅವರ ಮಾರ್ಗದರ್ಶನದಲ್ಲಿ ಇನ್‍ ಸ್ಪೆಕ್ಟರ್ ಎಂ.ವಿ.ಶ್ರೇಷಾದ್ರಿ ಮತ್ತು ಪಿಎಸ್ಸೈ ಮಹಾಲಕ್ಷ್ಮಮ್ಮ ಹಾಗೂ ಸಿಬ್ಬಂದಿ ರಮೇಶ್, ಪುರುಷೋತ್ತಮ್, ನರಸಿಂಹಮೂರ್ತಿ ನಾಗರಾಜು, ಬಸವರಾಜ್, ಉಮೇಶ್ ಆರೋಪಿಗಳನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಇದೇ ರೀತಿ ಇನ್ನು ಅನೇಕ ಪ್ರಕರಣಗಳಲ್ಲಿ ಆರೋಪಿಗಳು ದಂಡದ ಹಣವನ್ನು ಪಾವತಿಸದೇ ತಲೆ ಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News