ಪ್ರೊ ಕಬಡ್ಡಿ: ಪಾಟ್ನಾಕ್ಕೆ ಹ್ಯಾಟ್ರಿಕ್ ಕಿರೀಟ

Update: 2017-10-28 18:20 GMT

ಪಾಟ್ನಾ ಪೈರೇಟ್ಸ್ ತಂಡ ಐದನೆ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಫೈನಲ್‌ನಲ್ಲಿ ಗುಜರಾತ್ ಫಾರ್ಚೂನ್‌ಜೈಂಟ್ಸ್ ತಂಡವನ್ನು 55-38 ಅಂತರದಲ್ಲಿ ಬಗ್ಗು ಬಡಿದು ಸತತ ಮೂರನೆ ಬಾರಿ ಪ್ರಶಸ್ತಿ ಜಯಿಸಿದೆ ಚೆನ್ನೈನ ಜವಾಹರಲಾಲ್ ನೆಹರೂ ಒಳಾಂಗಣ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತಂಡ ಮೊದಲ ಬಾರಿ ಫೈನಲ್ ತಲುಪಿ ಚೊಚ್ಚಲ ಪ್ರಶಸ್ತಿ ಗೆಲ್ಲುವ ಗುಜರಾತ್ ಕನಸನ್ನು ಭಗ್ನಗೊಳಿಸಿತು. ಪಾಟ್ನಾ ತಂಡದ ಪ್ರದೀಪ್ 24 ಪಾಯಿಂಟ್ಸ್ ಸಂಪಾದಿಸಿ ತಂಡಕ್ಕೆ ಮೂರನೆ ಬಾರಿ ಪ್ರಶಸ್ತಿ ಗೆಲ್ಲಲು ದೊಡ್ಡ ಕೊಡುಗೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor