ಓ ಮೆಣಸೇ..

Update: 2017-10-30 05:15 GMT

ಬಡವರ ಸೇವೆ ಮಾಡಿದ ನನಗೆ ಅವರೇ ಆಸರೆ - ಡಾ.ಎಂ.ವೀರಪ್ಪ ಮೊಯ್ಲಿ, ಸಂಸದ
-ದೇಶ ಸೃಷ್ಟಿಸಿದ ಹೊಸ ಬಡವರು ಅಂಬಾನಿಗಳು.

---------------------

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಅರ್ಹತೆ ಇದ್ದವರಿಗೆ ಮಾತ್ರ ಟಿಕೆಟ್ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
-ಕುಮಾರಸ್ವಾಮಿ ಬಂಡಾಯವೇಳುವುದು ಖಚಿತ.

---------------------
132 ವರ್ಷಗಳ ಇತಿಹಾಸವಿರುವ ಕಾಂಗ್ರೆಸನ್ನು ಸುಲಭವಾಗಿ ಅಳಿಸಿ ಹಾಕಲು ಸಾಧ್ಯವಿಲ್ಲ - ಪ್ರಣವ್ ಮುಖರ್ಜಿ, ಮಾಜಿ ರಾಷ್ಟ್ರಪತಿ
-ಅಳಿಸಿ ಹಾಕುವ ನಿಮ್ಮ ಪ್ರಯತ್ನವೆಲ್ಲ ವಿಫಲವಾಯಿತು ಎಂಬ ನಿರಾಶೆಯೇ?
---------------------
ಬಂಟ್ವಾಳ ಕ್ಷೇತ್ರದ ಮತದಾರರ ಋಣ ತೀರಿಸಲು ಸಾಧ್ಯವಿಲ್ಲ - ರಮಾನಾಥ ರೈ, ಸಚಿವ
-ಮತದಾರರ ಜೊತೆಗೆ ಅಷ್ಟೊಂದು ಉದ್ಧಟತನದ ಮಾತೇ?
---------------------

ಅಪ್ಪ ನೆಟ್ಟ ಆಲದ ಮರ ಅಂತ ಜನತೆ ಜೆಡಿಎಸ್‌ಗೆ ಮತ ಹಾಕಬಾರದು - ಆರ್.ಅಶೋಕ್, ಬಿಜೆಪಿ ನಾಯಕ
-ಆಲದ ಮರವಾದರೂ ಇರಲಿ, ರೈತರಿಗೆ ನೇಣು ಹಾಕಿಕೊಳ್ಳಲು.
---------------------

ರಾಹುಲ್ ಗಾಂಧಿ ಜನಪ್ರಿಯತೆ ಕಂಡು ಬಿಜೆಪಿಯವರು ಬೆಚ್ಚಿ ಬಿದ್ದಿದ್ದಾರೆ - ರಮ್ಯಾ, ನಟಿ
 -ನಿಮ್ಮ ಮಾತಿಗೆ ರಾಹುಲ್‌ಗಾಂಧಿಯವರೂ ಬೆಚ್ಚಿ ಬಿದ್ದಿದ್ದಾರೆ. 

---------------------

ಮಾತಿಗಿಂತ ಕೃತಿ ಲೇಸು - ಬಾಬಾ ರಾಮ್‌ದೇವ್, ಯೋಗಗರು

-ಮೋದಿಯ ಮಾತಿಗಿಂತ ತಮ್ಮ ನಕಲಿ ಕಂಪೆನಿಯ ವಿ-ಕೃತಿಗಳೇ ಲೇಸು ಅಂತೀರಾ?
---------------------

ಪ್ರಧಾನಿ ನರೇಂದ್ರಮೋದಿ ಹಿಟ್ಲರ್‌ನಂತೆ ಸರ್ವಾಧಿಕಾರಿ - ಮಲ್ಲಿಕಾರ್ಜುನ ಖರ್ಗೆ, ಸಂಸದ
-ಕಾಂಗ್ರೆಸ್‌ಗೆ ಗ್ಯಾಸ್ ಚೇಂಬರ್ ಸಿದ್ಧಗೊಳಿಸುತ್ತಿರುವ ಬಗ್ಗೆ ಆತಂಕವೇ?

 ---------------------

ಭಾರತದ ಅರ್ಥವ್ಯವಸ್ಥೆ ಸರಿಯಾದ ದಿಕ್ಕಿನಲ್ಲೇ ಸಾಗುತ್ತಿದೆ - ನರೇಂದ್ರ ಮೋದಿ, ಪ್ರಧಾನಿ
-ದಿಕ್ಕು ಮಾತ್ರ ಕೆಳಮುಖವಾಗಿದೆ ಎನ್ನುವುದು ದುಃಖದ ವಿಷಯ.

---------------------

ನನಗೂ ಸ್ವಾಮೀಜಿ ಆಗುವ ಅವಕಾಶ ಒಲಿದು ಬಂದಿತ್ತು - ಚಂದ್ರಶೇಖರ ಪಾಟೀಲ, ಸಾಹಿತಿ
-ಒಟ್ಟಿನಲ್ಲಿ ಭಕ್ತರು ಪಾರಾದರು, ಕನ್ನಡ ಓದುಗರು ಬಲಿಯಾದರು.

---------------------

ನಾನು ಸಾಯುವವರೆಗೂ ಕಾಂಗ್ರೆಸ್‌ನಲ್ಲೇ ಇರುತ್ತೇನೆ - ಪ್ರಕಾಶ್.ಕೆ. ಕೋಳಿವಾಡ, ಕಾಂಗ್ರೆಸ್ ಕಾರ್ಯದರ್ಶಿ
 -ಕಾಂಗ್ರೆಸ್ ಸಾಯುವವರೆಗೆ ಎಂದು ತಿದ್ದಿಕೊಳ್ಳಬೇಕು.

---------------------
 ‘ಜಿ.ಎಸ್.ಟಿ’ ಎಂದರೆ ‘ಗಬ್ಬರ್‌ಸಿಂಗ್ ಟ್ಯಾಕ್ಸ್’ - ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ
-ಕಿತ್ನೇ ಆದ್ಮೀ ಥೇ ಎಂದು ಮೋದಿ ಕಾಂಗ್ರೆಸ್‌ನ ಸಂಸದರನ್ನು ಎಣಿಸಿದರಂತೆ.
---------------------

ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೇ ಬರುವುದು ಅಷ್ಟೇ ಸತ್ಯ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
-ಸೂರ್ಯ, ಚಂದ್ರರು ಇರುವುದು ಸುಳ್ಳು ಎಂದು ಜನರು ಹೇಳ ತೊಡಗಿದ್ದಾರೆ.

---------------------
ಕೇಂದ್ರ ಸರಕಾರ ನನ್ನನ್ನು ತುಚ್ಛವಾಗಿ ಕಾಣುತ್ತಿದೆ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
-ಮಕ್ಕಳೇ ತುಚ್ಛವಾಗಿ ಕಾಣುತ್ತಿರುವಾಗ ಇತರರ ವಿಷಯದಲ್ಲೇಕೆ ನೋಯುತ್ತೀರಿ?

---------------------

ಹೊಸ ಚಪ್ಪಲಿ ಆರಂಭದಲ್ಲಿ ಕಚ್ಚುತ್ತದೆ (ನೋಟು ನಿಷೇಧ ಕುರಿತು) - ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ
-ಜನ ತಮ್ಮ ಸವೆದ ಚಪ್ಪಲಿ ಹಿಡಿದು ಕಾಯುತ್ತಿದ್ದಾರೆ.
---------------------

1989ರ ಮೊದಲು ನಾನು ವಿಧಾನ ಸೌಧದ ಕಿಟಕಿ ಬಾಗಿಲು ನೋಡಿರಲಿಲ್ಲ - ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ
- ಜನರು ಇದೀಗ ಹೊರ ಹೋಗುವ ಬಾಗಿಲು ತೋರಿಸುತ್ತಿದ್ದಾರೆ.

---------------------
ಧರ್ಮಾಧಿಕಾರಿಯೇ ನನ್ನ ಮೊದಲ ವ್ಯಕ್ತಿತ್ವ - ಡಾ.ಡಿ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ ಧರ್ಮಸ್ಥಳ
-ಕೊಲೆಯಾದ ಸೌಜನ್ಯಾಳ ಆತ್ಮ ನಕ್ಕಿತೇ?
---------------------

ದೇಹದ ಸ್ವಚ್ಛತೆ ಮನಸ್ಸಿನ ಸ್ವಚ್ಛತೆಯ ಪ್ರತಿಬಿಂಬ - ಸಿ.ಟಿ.ರವಿ, ಶಾಸಕ
-ಮನಸ್ಸನ್ನು ಇನ್ನಾದರೂ ಸ್ವಚ್ಛವಾಗಿ ಇಟ್ಟುಕೊಳ್ಳಬಾರದೇ?
---------------------

ಅಲ್ಪ ಸಂಖ್ಯಾತ ಹಕ್ಕು ಪಡೆಯಲು ವೀರಶೈವರು ಹಿಂದೂಗಳಲ್ಲ ಎಂದು ಹೇಳಿಕೆ ನೀಡುವುದು ಸರಿಯಲ್ಲ -ಡಾ.ಎಂ.ಚಿದಾನಂದ ಮೂರ್ತಿ, ಸಂಶೋಧಕ
ಅದೇನೇನೋ ಪಡೆಯಲು ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳುತ್ತಿಲ್ಲವೇ?
---------------------
  ಬಿಜೆಪಿಯಲ್ಲಿ ಬ್ರಹ್ಮಚಾರಿಗಳಿಗೆ ಉಜ್ವಲ ಭವಿಷ್ಯವಿದೆ - ಭಯ್ಯಲಾಲ್ ರಾಜಾವಾಡೆ, ಛತೀಸ್‌ಗಡ ಸಚಿವ
 -ಮತ್ತು ಅವರ ಹೆಂಡತಿಯರಿಗೆ ಅಪಾಯವಿದೆ.

---------------------

ವೈರಿಗಳು ಒಂದಾಗಿರುವುದೇ ನನಗೆ ಪ್ಲಸ್ ಪಾಯಿಂಟ್ - ಸಿದ್ದರಾಮಯ್ಯ, ಮುಖ್ಯಮಂತ್ರಿ
-ನಿಮ್ಮ ವೈರಿಗಳು ನಿಮ್ಮ ಪಕ್ಷದೊಳಗಿರುವುದು ನಿಮ್ಮ ಮೈನಸ್ ಪಾಯಿಂಟ್
---------------------

ಈ ಬಾರಿ ಸಿ.ಎಂ.ಸಿದ್ದರಾಮಯ್ಯರಿಗೆ ತಕ್ಕ ಪಾಠ ಕಲಿಸಿಯೇ ಬಿಡುತ್ತೇವೆ - ಶ್ರೀನಿವಾಸ ಪ್ರಸಾದ್, ಬಿಜೆಪಿ ರಾಜ್ಯ ಉಪಾಧ್ಯಕ್ಷ
-ಮೊದಲು ತಾವು ಕಲಿಯಬೇಕಾದ ಪಾಠಗಳು ಬಹಳಷ್ಟಿವೆ 

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!