×
Ad

ಮನೆ ಬೀಗ ಮುರಿದು ನಗದು, ಚಿನ್ನಾಭರಣ ಕಳವು

Update: 2017-10-30 22:43 IST

ಮಂಡ್ಯ, ಅ.30: ಮಳವಳ್ಳಿ ಪಟ್ಟಣದ ಗೌಡಯ್ಯನ ಬೀದಿಯ ಮನೆಯೊಂದರಲ್ಲಿ  ಹಾಡಹಗಲಿನಲ್ಲೇ ಬೀಗ ಮುರಿದು ನಗದು ಹಾಗೂ ಬೆಳ್ಳಿ ಚಿನ್ನಾಭರಣಗಳನ್ನು ದೋಚಿರುವ ಪ್ರಕರಣ ಸೋಮವಾರ ನಡೆದಿದೆ.

ಶಿಕ್ಷಕ ನಾಗಯ್ಯ ಹಾಗೂ ಪತ್ನಿ ಇಬ್ಬರು ಸರಕಾರಿ ನೌಕರರಾಗಿದ್ದು, ಎಂದಿನಂತೆ ಬೆಳಗ್ಗೆ ಮನೆ ಬೀಗ ಹಾಕಿಕೊಂಡು ಕರ್ತವ್ಯಕ್ಕೆ ತೆರಳಿದ್ದಾಗ ದುಷ್ಕರ್ಮಿಗಳು ಈ ಕೃತ್ಯ ನಡೆಸಿದ್ದಾರೆ.

ಬಾಗಿಲು ಮುರಿದು ಒಳನುಗ್ಗಿರುವ ದುಷ್ಕರ್ಮಿಗಳು, 53 ಸಾವಿರ ರೂ ಸೇರಿದಂತೆ ಚಿನ್ನ, ಬೆಳ್ಳಿ ಆಭರಣಗಳನ್ನು ಕಳವು ಮಾಡಿದ್ದಾರೆ ಎಂದು ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪಟ್ಟಣ ಠಾಣೆ  ಪೊಲೀಸ್ ಇನ್ ಸ್ಪೆಪೆಕ್ಟರ್ ಗಂಗಾಧರ್. ಸಿಬ್ಬಂದಿ, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ಪರಿಶೀಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News