'ಆತ್ಮಯೋಜನೆ' ಅನುಷ್ಠಾನಕ್ಕೆ ಅಧಿಕಾರಿಗಳು ಒಗ್ಗೂಡಬೇಕು: ಡಾ.ಎಂ.ಜೆ.ಚಂದ್ರೇಗೌಡ
ಮಂಡ್ಯ, ಅ.30: ಕೃಷಿ ಮುನ್ನಡೆ ‘ಆತ್ಮಯೋಜನೆಯ’ ಕಾರ್ಯಕ್ರಮದ ಮೂಲಕ ರೈತರ ಸಮಸ್ಯೆಯನ್ನು ಬಗೆಹರಿಸಲು ಎಲ್ಲ ಇಲಾಖಾ ಅಧಿಕಾರಿಗಳು ಒಗ್ಗೂಡಬೇಕು ಎಂದು ಕೇಂದ್ರ ಕೃಷಿ ಇಲಾಖೆಯ ಆತ್ಮ ಮಾರ್ಗಸೂಚಿ ರೂಪಕ ಡಾ. ಎಂ.ಜೆ.ಚಂದ್ರೇಗೌಡ ಸೂಚಿಸಿದ್ದಾರೆ.
ಸೋಮವಾರ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಆತ್ಮಯೋಜನೆ ಅನುಷ್ಠಾನ ಪಾಲುದಾರರ ಒಂದು ದಿನದ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಕೃಷಿಗೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಒಗ್ಗೂಡಿ ರೈತ ಪರ ಶ್ರಮಿಸಿದರೆ, ರೈತರ ಸಮಸ್ಯೆ ಬಗೆಹರಿಸುವ ಜೊತೆಗ್ಲೆ ಅವರ ಆದಾಯ ದ್ವಿಗುಣಗೋಳಿಸಬಹುದು ಎಂದರು.
ಅಭಿವೃದ್ದಿ ಇಲಾಖೆಗಳು, ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾನಿಲಯಗಳು, ಖಾಸಗಿ ವಿಸ್ತರಣಾ ಸೇವಾದಾರರು, ರೈತ ಆಸಕ್ತಿ ಗುಂಪುಗಳು, ಮಾಧ್ಯಮಗಳು, ಖಾಸಗಿ ಸಂಸ್ಥೆಗಳೆಲ್ಲವೂ ಯೋಜನೇಯ ಭಾಗಿದಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ರೈತರಪರ ಕೆಲಸ ಮಾಡುತ್ತಿವೆ. ಭಾಗಿದಾರರು ಒಗ್ಗೂಡಿಕೊಂಡು ಹೋಗದಿರದ ಕಾರಣ ಶೇ.100ರಷ್ಟು ಜನರಿಗೆ ತಲುಪಬೇಕಾದ ಮಾಹಿತಿ ಶೇ.40ರಷ್ಟು ಜನರಿಗೆ ಮಾತ್ರ ತಲುಪುತ್ತಿದೆ ಎಂದು ವಿಷಾದಿಸಿದರು.
ರೈತರು ಯಾವ ಬೆಳೆಯನ್ನು ಯಾವಾಗ ಬೆಳೆಯಬೇಕು, ಯಾವ ಸ್ಥಳದಲ್ಲಿ, ಯಾವ ಕಾಲದಲ್ಲಿ ಬೆಳೆಯಬೇಕು, ಅದಕ್ಕೆ ಪೂರಕವಾದ ಬಿತ್ತನೆ ಬೀಜ, ನೀರು, ಗಿಡ, ರಸಗೊಬ್ಬರ ತಂತ್ರಜ್ಞಾನ ಮುಂತಾದ ಮಾಹಿತಿಯನ್ನು ಇಲಾಖೆಗಳಿಂದ ನೀಡಬೇಕು. ಕೃಷಿ, ನೀರಾವರಿ, ಮಿನುಗಾರಿಕೆ, ಅರಣ್ಯ, ತೋಟಗಾರಿಕೆ, ರೇಷ್ಮೆ, ಹೈನುಗಾರಿಕೆ ಇಲಾಖೆ, ಮಾಧ್ಯಮ ಮತ್ತು ಮುತಾಂದ ಎಲ್ಲ ಇಲಾಖೆಗಳು ರೈತರಿಗೆ ಸಹಕರಿಸಿ ಮಾಹಿತಿ ಸೌಕರ್ಯ ನೀಡಿದರೆ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಬಹುದು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾ ಯೋಜನಾ ನಿರ್ದೇಶಕ ಗಣಪತಿ ಸಿ ನಾಯಕ್, ಸಂಯೋಜಕ ಡಾ.ಜಿ.ಎಂ.ವರದರಾಜು, ಜಂಟಿ ಕೃಷಿ ನಿರ್ದೇಶಕಿ ರಾಜಾ ಸುಲೋಚನ, ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ್, ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.