ದೇಶದಲ್ಲಿ ಬಿಜೆಪಿ ಆತಂಕದ ವಾತಾವರಣ ನಿರ್ಮಿಸುತ್ತಿದೆ: ಶ್ರೀರಾಮರೆಡ್ಡಿ
ಬಾಗೇಪಲ್ಲಿ, ಅ.31: ಬಿಜೆಪಿ ಹಾಗೂ ಆರೆಸ್ಸೆಸ್ ದೇಶದಲ್ಲಿ ಮತಕಲಹಗಳ ಮೂಲಕ ಆತಂಕದ ವಾತಾವರಣ ನಿರ್ಮಾಣ ಮಾಡುತ್ತಿದೆ ಎಂದು ಮಾಜಿ ಶಾಸಕ ಹಾಗೂ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ತಿಳಿಸಿದ್ದಾರೆ.
ತಾಲೂಕಿನ ಯಲ್ಲಂಪಲ್ಲಿ ಗ್ರಾಮದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ(ಮಾಕ್ಸ್ ವಾದಿ) ಕಸಬಾ ಹೋಬಳಿಯ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಹಮ್ಮಿಕೊಂಡಿದ್ದ 4ನೆ ಸಮ್ಮೇಳನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 3 ವರ್ಷಗಳಲ್ಲಿ ಸಿಪಿಎಂನ ರಾಜಕೀಯ ಹೋರಾಟ, ಸಂಘಟನಾತ್ಮಕ ವಿಷಯಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲು ಸ್ಥಳೀಯ ಸಮಿತಿಗಳಿಂದ ಹಿಡಿದು ರಾಷ್ಟ್ರೀಯ ಸಮಿತಿಗಳವರೆಗೂ ಸಮ್ಮೇಳನಗಳನ್ನು ಸಿಪಿಎಂ ಪಕ್ಷ ಹಮ್ಮಿಕೊಳ್ಳುತ್ತದೆ. ಬೇರೆ ಯಾವ ಪಕ್ಷದಲ್ಲಿ ಇಂತಹ ಸಮ್ಮೇಳನಗಳು ಹಮ್ಮಿಕೊಂಡು ಚರ್ಚಿಸುವುದಿಲ್ಲ. ಆದರೆ, ಸಿಪಿಎಂ ಪಕ್ಷ ಸ್ಥಳೀಯ ಸದಸ್ಯರು ಅಭಿಪ್ರಾಯಗಳು ಹೇಳುತ್ತಾರೆ. ಸಮ್ಮೇಳನಗಳಲ್ಲಿ ಚರ್ಚಿಸಿದ ಬಳಿಕ ಅಂತಿಮವಾಗಿ ತೀರ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದರು.
ಭ್ರಷ್ಟಾಚಾರ ಆರೋಪದ ಮೇಲೆ ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ಅವರು ಇದೀಗ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ. ಇಂತಹವರಿಂದ ರಾಜ್ಯದ ಪ್ರಗತಿ ಸಾಧ್ಯವೇ? ಎಂದು ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ, ಜಿಲ್ಲಾ ಸಮಿತಿ ಸದಸ್ಯ ಚನ್ನರಾಯಪ್ಪ, ತಾಲೂಕು ಕಾರ್ಯದರ್ಶಿ ಎಂ.ಎನ್.ರಘುರಾಮರೆಡ್ಡಿ, ಕಸಬಾ ಸ್ಥಳೀಯ ಸಮಿತಿ ಕಾರ್ಯದರ್ಶಿ ಮುಸ್ತಾಫಾ, ಸಿಪಿಎಂ ಮುಖಂಡ ಶ್ರೀರಾಮನಾಯಕ್ ಮತ್ತಿತರರು ಹಾಜರಿದ್ದರು.