ಸಾಲಬಾಧೆ: ರೈತ ಆತ್ಮಹತ್ಯೆ
Update: 2017-10-31 19:55 IST
ಮದ್ದೂರು, ಅ.31: ಸಾಲಬಾಧೆ ತಾಳಲಾರದೆ ನಾಲೆಗೆ ಬಿದ್ದು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಮಾರಸಿಂಗನಹಳ್ಳಿಯಲ್ಲಿ ನಡೆದಿದೆ.
ಗೂಳಿಗೌಡ ಅವರ ಪುತ್ರ ಎಂ.ಜಿ.ಶಿವಕುಮಾರ್ (42) ಆತ್ಮಹತ್ಯೆ ಮಾಡಿಕೊಂಡಿದ್ದು, ಪತ್ನಿ ಪುಷ್ಪಲತ, ಪುತ್ರಿಯರಾದ ಎಂ.ಎಸ್.ನಂದಿತಾ ಮತ್ತು ಎಂ.ಎಸ್.ಮಾನಸ ಅವರನ್ನು ಅಗಲಿದ್ದಾರೆ.
ಶಿವಕುಮಾರ್ ಅವರಿಗೆ ಶಿವಪುರ ಎಸ್‍ಬಿಐ ಶಾಖೆಯಲ್ಲಿ 8 ಲಕ್ಷ ರೂ., ಬೆಸಗರಹಳ್ಳಿ ಕಾವೇರಿ ಗ್ರಾಮೀಣ ಬ್ಯಾಂಕ್‍ನಲ್ಲಿ 80 ಸಾವಿರ ರೂ., 90 ಸಾವಿರ ರೂ. ಆಭರಣ ಸಾಲ, 2 ಲಕ್ಷ ರೂ. ಕೈಸಾಲವಿದೆ ಎನ್ನಲಾಗಿದೆ.
ಸತತ ಬರಗಾಲದಿಂದ ಬೆಳೆ ಇಲ್ಲದೆ, ಸಾಲ ತೀರಿಸಲು ಸಾಧ್ಯವಾಗದ ಕಾರಣ ಗ್ರಾಮದ ಬಳಿ ಇರುವ ನಾಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದ್ದು, ಬೆಸಗರಹಳ್ಳಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.