ಹನೂರು : ಕನ್ನಡ ರಾಜ್ಯೋತ್ಸವ ಆಚರಣೆ
ಹನೂರು,ನ.1 : ಕನ್ನಡ ಭಾಷೆ ಒಂದು ಭಾಷೆ ಮಾತ್ರವಲ್ಲ ಇದು ಒಂದು ಸಂಸ್ಕೃತಿ ಏಕೆಂದರೆ ಇದಕ್ಕೆ ಸರಿಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ .ಇದರ ಉಳಿವು ಅಳಿವಿನ ಪ್ರಶ್ನೆ ಪ್ರಸ್ತುತ ದಿನಗಳಲ್ಲಿ ಬಂದಿದೆ ಅದಕ್ಕೆ ಕಾರಣ ಕನ್ನಡಿಗರಾದ ನಾವೇ ಎಂದು ಹನೂರು ವಲಯ ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷರಾದ ಶ್ರೀನಿವಾಸ್‍ನಾಯ್ಡು ತೀಳಿಸಿದರು .
ಹನೂರು ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನಲ್ಲಿ ಹನೂರು ಕನ್ನಡ ಸಾಹಿತ್ಯ ಪರಿಷತ್ತು ವತಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಆಚರಣೆ ಮತ್ತು ನಿತ್ಯೋತ್ಸವ ಕಾರ್ಯಕ್ರಮದ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಕನ್ನಡ ಭಾಷೆಯನ್ನು ಕಟ್ಟಿಬೆಳಸುವ ಪರಿಸ್ಥಿತಿ ಬಂದಿರುವುದಕ್ಕೆ ಬೇರೆ ಯಾರೂ ಕಾರಣರಲ್ಲ ಆದಕ್ಕೆ ಕನ್ನಡಿಗರಾದ ನಾವೇ ಕಾರಣ, ಕನ್ನಡದ ಉಳಿವು ಅಳಿವು ಕನ್ನಡಿಗರಾದ ನಮ್ಮ ಕೈಯಲ್ಲಿದೆ . ಕನ್ನಡಿಗರಾದ ನಾವು ಭಾಷೆಯ ಅಭಿಮಾನವನ್ನು ಬೆಳಸಿಕೂಳ್ಳಬೇಕು, ಕನ್ನಡತನವನ್ನು ಪ್ರತಿ ದಿನ ವ್ಯವಹರಿಸುವಾಗ, ಶಾಲೆಯಲ್ಲಿ ಮನೆಯಲ್ಲಿ ಮಾತನಾಡುವಾಗ ಸ್ಪಷ್ಟವಾದಂತಹ ಕನ್ನಡ,ಶುದ್ದವಾದಂತಹ ಕನ್ನಡವನ್ನು ಬಳಸಿ ಸಾವಿರಾರು ವರ್ಷಗಳ ಇತಿಹಾಸವಿರುವಂತಹ ಕನ್ನಡ ಭಾಷೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ರವಾನಿಸುವ ಪ್ರಯತ್ನ ಮಾಡಿ ಎಂದು ಹೇಳಿದರು .
ನಂತರ ಮಾತನಾಡಿದ ಹನೂರು ಕನ್ನಡ ಸಾಹಿತ್ಯ ಪರಿಷತ್ತನ ಗೌರವ ಅಧ್ಯಕ್ಷ ಶಾಂತಿಮೂರ್ತಿಯವರು ನಮ್ಮ ಯುವಕರು ಮನಸ್ಸು ಮಾಡಿದರೆ ವಿಜ್ಞಾನದಲ್ಲಾಗಲೀ, ಕನ್ನಡ ಭಾಷೆಯಲ್ಲಾಗಲೀ ಪ್ರಭುತ್ವ ಪಡೆಯುವುದು ಅಸಾಧ್ಯವೇನಲ್ಲ, ಮನಸ್ಸು ಮಾಡಬೇಕಷ್ಟೇ ತಿಳಿಸಿದರು.
ಹನೂರು ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಸಲಹೆಗಾರರು ಹಾಗೂ ಯುವ ಕವಿಗಳಾದ ಗುರುಸ್ವಾಮಿ ಮಾತನಾಡಿ ಗ್ರಾಮೀಣ ಪ್ರದೇಶದ ಗಡಿ ಭಾಗದ ಹಳ್ಳಿ ಹಳ್ಳಿಯಲ್ಲಿ ಕನ್ನಡದ ನುಡಿ ಹಬ್ಬ ರಾಜ್ಯೋತ್ಸವನ್ನು ಆಚರಿಸುವ ಮೂಲಕ ಕನ್ನಡ ಅಭಿಮಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹನೂರು ಘಟಕ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮೊರಾರ್ಜಿ ಶಾಲೆಯ ಎಸ್.ಎಸ್.ಎಲ್,ಸಿ ಯಲ್ಲಿ ಕನ್ನಡ ವಿಷಯದಲ್ಲಿ ಅತೀ ಹೆಚ್ಚು ಅಂಕ ಪಡೆದ, ಮಂಜುಳ, ಕಾವ್ಯ, ಅಶ್ವಿತಾ, ಪುಂಗೂಡಿ, ಇಂಚರ, ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಹನೂರು ಘಟಕದ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾದ ಮಲ್ಲಣ್ಣ, ಅಶೋಕ್, ಈರೇಂದ್ರ, ಕಾರ್ಯದಶಿಗಳಾದ ಮಲ್ಲೇಶ್, ರವೀಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾದ ಕೃಷ್ಣ, ಸೋಮಣ್ಣ, ಮೊರಾರ್ಜಿ ಶಾಲೆಯ ಪ್ರಾಂಶುಪಾಲರಾದ ರಾಜು, ಕರವೇ ಸ್ವಾಭಿಮಾನಿ ಬಣದ ಅಧ್ಯಕ್ಷ ವಿನೋದ್, ಮಾತೃಭೂಮಿ ಮೂರ್ತಿ, ಗೀರೀಶ್, ಮೊರಾರ್ಜಿ ಶಾಲೆಯ ಶಿಕ್ಷಕರು, ಶಿಕ್ಷಕಿಯರು, ವಿದ್ಯಾರ್ಥಿಗಳು ಹಾಗೂ ಇನ್ನಿತರರು ಇದ್ದರು.