ಕ್ಯಾಂಟರ್ ಹರಿದು ವಿದ್ಯಾರ್ಥಿನಿ ಸಾವು
Update: 2017-11-01 23:23 IST
ಮೈಸೂರು,ನ.1: ಕ್ಯಾಂಟರ್ ಹರಿದು ವಿದ್ಯಾರ್ಥಿನಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಮೈಸೂರಿನ ಟಿಪ್ಪು ವೃತ್ತದಲ್ಲಿ ನಡೆದಿದೆ.ಮೃತಳನ್ನು ಜೆಎಸ್ ಎಸ್ ಕಾಲೇಜಿನ ಫಾರ್ಮಸಿ ಕಾಲೇಜು ವಿದ್ಯಾರ್ಥಿನಿ ತನುಶ್ರೀ (18) ಎಂದು ಗುರುತಿಸಲಾಗಿದೆ. ಎಲ್ ಐಸಿ ವೃತ್ತದಿಂದ ಟಿಪ್ಪು ವೃತ್ತದ ಕಡೆ ಹೋಗುವ ವೇಳೆ ಅವಘಡ ಸಂಭವಿಸಿದ್ದು, ಯುವತಿಗೆ ಹಿಂಬದಿಯಿಂದ ಕ್ಯಾಂಟರ್ ಹರಿದಿದೆ. ಕ್ಯಾಂಟರ್ ಚಕ್ರ ಯುವತಿ ಮೇಲೆಯೇ ಹರಿದ ಪರಿಣಾಮ ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ.
ಈ ಸಂಬಂಧ ಎನ್. ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕ್ಯಾಂಟರ್ ಚಾಲಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.